ದಾವಣಗೆರೆ: ಕೆರೆಗೆ ತಡೆಗೋಡೆ ಇಲ್ಲದ ಕಾರಣ ವ್ಯಾನ್ ಕೆರೆಗೆ ನುಗ್ಗಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಸಮೀಪದ ಕೆರೆಯಲ್ಲಿ ಸಂಭವಿಸಿದೆ.
ಕೆರೆಯಲ್ಲಿ ವ್ಯಾನ್ ಮುಳಗಿ ಯಲೋದಹಳ್ಳಿ ಗ್ರಾಮದ ಬಸವರಾಜ್ (55) ಸಾವನ್ನಪ್ಪಿದ್ದಾರೆ. ಯಲೋದಹಳ್ಳಿ ಗ್ರಾಮದಿಂದ ಚಿರಡೋಣಿ ಗ್ರಾಮಕ್ಕೆ ಪತ್ನಿಯನ್ನು ಬಿಟ್ಟು ವಾಪಾಸ್ ಬರುವಾಗ ಈ ಘಟನೆ ಸಂಭವಿಸಿದೆ. ದಾಗಿನಕಟ್ಟೆ ಹಾಗೂ ಯಲೋದಹಳ್ಳಿ ಗ್ರಾಮದ ಮಧ್ಯದ ಹಳ್ಳೂರಕಟ್ಟೆ ಕೆರೆಯಲ್ಲಿ ತಡೆಗೋಡೆ ಇಲ್ಲದ ಕಾರಣ ವ್ಯಾನ್ ಮುಳುಗಿದೆ. ಕೆರೆಯಲ್ಲಿ ಯಾವುದೋ ವ್ಯಾನ್ ಇರಿವುದ ಕಂಡು ಜನ ಜೆಸಿಬಿಯಿಂದ ವಾಹನವನ್ನು ಹೊರ ತೆಗೆದಾಗ ಈ ಘಟನೆ ಬೆಳಕಿಗೆ ಬಂದಿದೆ.