ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್ ಗೆ ಕಾರು ನುಗ್ಗಿದ ಪರಿಣಾಮ ಇಬ್ಬರಿಗೆ ಗಾಯಗಳಾಗಿವೆ.
ದಾವಣಗೆರೆ ಹೊರ ವಲಯದ ತೋಳಹುಣಸೆ ಬಳಿ ಈ ಘಟನೆ ನಡೆದಿದೆ. ದಾವಣಗೆರೆಯಿಂದ ಕುರ್ಕಿ ಗ್ರಾಮದ ಕಡೆ ಹೋಗುವಾಗ ತೋಳಹುಣಸೆ ಬಳಿ ಈ ಅಪಘಾತ ಸಂಭವಿಸಿದೆ. ಕಾರು ಮುಂಭಾಗ ಹಾಗೂ ಮತ್ತು ಹಿಂಭಾಗ ಹಾನಿಯಾಗಿದೆ. ಮೆಡಿಕಲ್ ಶಾಪ್ ಮುಂದಿನ ಛಾವಣಿ ಹಾನಿಯಾಗಿದೆ. ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.
ಈ ಅಪಘಾತದಿಂದ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.