ದಾವಣಗೆರೆ: ದಾವಣಗೆರೆಯಿಂದ ಹರಪನಹಳ್ಳಿ ಕಡೆಗೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 20 ಜನರಿಗೆ ಗಾಯವಾಗಿದೆ.
ದಾವಣಗೆರೆ ಕಡೆಯಿಂದ ಹರಪನಹಳ್ಳಿ ಕಡೆ ಹೋಗುತ್ತಿದ್ದ ಬಸ್ ಹರಪನಹಳ್ಳಿ ತಾಲ್ಲೂಕಿನ ಸತ್ತೂರು ಕೆರೆ ಬಳಿ ಉರುಳಿ ಬಿದ್ದಿದೆ. ಇಂದು (ಅ.24) ಸಂಜೆ ಕೆಸ್ ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಲ್ಟಿಯಾಗಿದೆ. ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ
ಸತ್ತೂರು ಗ್ರಾಮದ ಹನುಮಕ್ಕ (52) ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂಬ ಮಾಹಿತಿ ಇದ್ದು, ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅವಘಡ ಸಂಭವಿಸಿದೆ.
ಸುದ್ದಿ ಗೊತ್ತಾಗುತ್ತಿದ್ದಂತೆ ನೂರಾರು ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಬಸ್ ನಲ್ಲಿ ಸಿಲುಕಿದವರನ್ನು ಹೊರ ತೆಗೆದಿದ್ದಾರೆ. ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



