ದಾವಣಗೆರೆ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ವತಿಯಿಂದ ತನ್ನ ಗ್ರಾಹಕರಿಗೆ ಫ್ರೀಡಮ್ ಫ್ಲ್ಯಾನ್ ಅನ್ನು ವಿಸ್ತರಿಸಿದೆ. ಬಿಎಸ್ಎನ್ಎಲ್ 4ಜಿ ಮೊಬೈಲ್ ಸೇವೆಗಳನ್ನು ಒಂದು ಪೂರ್ಣ ತಿಂಗಳವರೆಗೆ ಪರೀಕ್ಷಿಸಲು ಮತ್ತು ಅನುಭವಿಸಲು ನೀಡುವ ಸೀಮಿತ ಅವಧಿಯ ರೂ.1 ಕೊಡುಗೆಯಾಗಿದೆ. ಈ ಉಪಕ್ರಮವು ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಸ್ವಂತ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4ಜಿ ತಂತ್ರಜ್ಞಾನವನ್ನು ಯಾವುದೇ ವೆಚ್ಚವಿಲ್ಲದೆ ಅನುಭವಿಸುವ ಅವಕಾಶವನ್ನು ನೀಡುತ್ತದೆ.
ಹೊಸ ಯೋಜನೆಯ ಮಹತ್ವವೇನು.?
ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು (ಸ್ಥಳೀಯ/ಎಸ್ಟಿಡಿ), ದಿನಕ್ಕೆ 2 ಜಿಬಿ ಹೈ-ಸ್ಪೀಡ್ ಡೇಟಾ, ದಿನಕ್ಕೆ 100 ಎಸ್ಎಂಎಸ್, ಮತ್ತು ಬಿಎಸ್ಎನ್ಎಲ್ ಸಿಮ್-ಸಂಪೂರ್ಣವಾಗಿ ಉಚಿತ. ಮಾನ್ಯತೆ -30 ದಿನಗಳು ಸೆಪ್ಟೆಂಬರ್ 15 ರವರೆಗೆ ಜಾರಿಯಲ್ಲಿರುತ್ತದೆ. ಗ್ರಾಹಕರು ಹತ್ತಿರದ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರ ಮತ್ತು ಪ್ರಾಂಚೈಸಿಗೆ ಭೇಟಿ ನೀಡುವ ಮೂಲಕ ಫ್ರೀಡಮ್ ಫ್ಲ್ಯಾನ್ ಅನ್ನು ಪಡೆಯಬಹುದು ಎಂದು ಬಿಎಸ್ಎನ್ಎಲ್ನ ಡಿಜಿಎಂ ತಿಳಿಸಿದ್ದಾರೆ.



