ದಾವಣಗೆರೆ: ಮಾ.25 ರಂದು ದಾವಣಗೆರೆಯಲ್ಲಿ ‘ವಿಜಯ ಸಂಕಲ್ಪ ಯಾತ್ರೆ’ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯದ ನಾಲ್ಕು ದಿಕ್ಕುಗಳಿಂದ ಬರುವ ಯಾತ್ರೆ ದಾವಣಗೆರೆಯಲ್ಲಿ ಅಂತ್ಯಗೊಂಡು ‘ಮಹಾ ಸಂಗಮ’ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಗರದ ಜಿಎಂಐಟಿ ಪಕ್ಕದ ವಿಶಾಲ ಜಾಗದಲ್ಲಿ ವೇದಿಕೆ ಸಜ್ಜಾಗುತ್ತಿದೆ.
ಜಿ.ಎಂ.ಐ.ಟಿ. ಕಾಲೇಜ್ ಪಕ್ಕದಲ್ಲಿ ಸರಿ ಸುಮಾರು 400 ಎಕ್ಕರೆ ಜಾಗದಲ್ಲಿ ಹತ್ತು ಲಕ್ಷ ಜನರ ಬರುವ ನಿರೀಕ್ಷೆ ಇದ್ದು 30 ಜೆ.ಸಿ.ಬಿ ಯಿಂದ ಸ್ವಚ್ಚತಾ ಕಾರ್ಯ ನಡೆಸಲಾಯಿತು.ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್,ಮಾಜಿ ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಜಿ.ಮಂಜನಾಯ್ಕ, ಮಾಯಕೊಂಡದ ಚುನಾವಣಾ ಪ್ರಭಾರಿ ಎನ್.ರಾಜಶೇಖರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್, ಸುರೇಶ್ ಗಂಡಗಳೆ, ರಾಜು ನಿಲಗೂಂದ ಗೌಡ, ಮಾಧ್ಯಮ ಪ್ರಮುಖ ವಿಶ್ವಾಸ, ಟಿಂಕರ್ ಮಂಜಣ್ಣ,ಬಾಲರಾಜ ಶ್ರೇಷ್ಠ, ಶಂಕರಗೌಡ ಬಿರಾದರ್,ಕಿರೀಟ ಸಿ.ಕಲಾಲ್,ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.



