ಡಿವಿಜಿ ಸುದ್ದಿ, ದಾವಣಗೆರೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಕೊರೊನಾ ಮುಕ್ತರಾಗಿ ಬರಲಿ ಎಂದು ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ನಗರದ ಅರಳಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿಸಿ ಶ್ರೀನಿವಾಸ್, ಯುವ ಮೋರ್ಚಾ ಅಧ್ಯಕ್ಷ ಶಿವಪ್ರಕಾಶ್, ಬಿಜೆಪಿ ದಕ್ಷಿಣದ ಪ್ರಧಾನ ಕಾರ್ಯದರ್ಶಿ ರಾಜು ನೀಲಗುಂದ್, ಪಾಲಿಕೆ ಸದಸ್ಯರಾದ ಶಿವನಗೌಡ ಪಾಟೀಲ ಮತ್ತು ಜಯಮ್ಮ, ಜಿಲ್ಲಾ ಯುವಮೊರ್ಚಾ ಉಪಾದ್ಯಕ್ಷ ಶ್ರೀಕಾಂತ್ ನೀಲಗುಂದ. ಆಶ್ರಯ ಸಮಿತಿ ಸದಸ್ಯ ಸನ್ನಿ ಜೈನ್, ಯುವ ಮೋರ್ಚಾ ಉಪಾಧ್ಯಕ್ಷ ಅಭಿಷೆಕ್ ಪಿ ಎಳೆಹೊಳೆ ಹರೀಶ್ ಶಾಮನೂರು, ಮುಖಂಡರಾದ ರಾಜು ಪಿ ವೀರಣ್ಣ ಗುರುಶಾಂತ ಸೋಗಿ, ಟಿಂಕರ್ ಮಂಜಣ್ಣ, ಗೌತಮ್ ಜೈನ್, ಮತ್ತು ಇತರರು ಭಾಗವಹಿಸಿದ್ದರು.




