ದಾವಣಗೆರೆ: ಸಿದ್ದರಾಮಯ್ಯ ದೇವಸ್ಥಾನದ ಬದಲು ಮಸೀದಿ ಬಗ್ಗೆನೇ ಹೆಚ್ಚು ಮಾತಡೋದು. ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯಕಾರಣಿ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ದಾವಣಗೆರೆಗೆ ಬಂದಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ದೇವಸ್ಥಾನ ನಿರ್ಮಿಸುತ್ತದೆ. ದೇವಸ್ಥಾನ ಉಳಿಸುವ ಕೆಲಸ ಮಾಡುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ನಂತರ ಮತ್ತೆ ರಾಜ್ಯ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಈ ಪ್ರವಾಸಕ್ಕೆ ಬಿಜೆಪಿಯಿಂದ ಯಾವುದೇ ತಡೆಯಿಲ್ಲ. ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಆರಂಭಿಸಲು ಗ್ರೀನ್ ಸಿಗ್ನಲ್ ನೀಡುವ ಅಗತ್ಯವಿಲ್ಲ. ಅವರು ಹಿರಿಯ ನಾಯಕ ಅವರು ಪ್ರವಾಸ ಮಾಡವ ಅಧಿಕಾರವಿದೆ ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ಧಾರೆ. ಸಮಾಜದ ಎಲ್ಲ ಜನಾಂಗದ ಬಗ್ಗೆ ಗಮನ ಹರಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ದಾವಣಗೆರೆಯಲ್ಲಿ ಎರಡು ದಿನದ ಚಿಂತನೆ-ಮಂಥನ ನಡೆಯಲಿದೆ ಎಂದು ತಿಳಿಸಿದರು.