ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ (BIET) ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸದೊಂದಿಗೆ ಸ್ವಾಗತಿಸಲಾಯಿತು.
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಆದೇಶದಂತೆ “ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾಮ್” ಡಿ.01 ರಿಂದ 10ರವರೆಗೆ ನಡೆಸಲಾಗುತ್ತಿದೆ. ಪ್ರತಿ ದಿನ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿರುತ್ತದೆ. ಮೊದಲ ದಿನ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲದ ನಿರ್ದೇಶಕ ಪ್ರೊ ವೈ ವೃಷಬೇಂದ್ರಪ್ಪ ತಮ್ಮ ಉಪನ್ಯಾಸದಲ್ಲಿ ತಾಂತ್ರಿಕವಿದ್ಯಾರ್ಥಿಗಳಿಗೆ ಪ್ರೊಫೆಷನಲ್ ಎಥಿಕ್ಸ್ ತುಂಬಾ ಮುಖ್ಯವಾದದ್ದು, ನೀವುಗಳು ನಿಮ್ಮ ತಂದೆ-ತಾಯಿಗಳು ಮಾಡಿರುವ ಪರಿಶ್ರಮವನ್ನು ಅರಿತು ಮುಂದುವರೆಯಬೇಕು.ಕೌಶಲ್ಯಯುತ ವ್ಯಕ್ತಿತ್ವದಿಂದ ಮಾತ್ರ ನಿಮ್ಮ ಏಳಿಗೆ ಸಾಧ್ಯ ಎಂದು ಹೇಳಿದರು.
ಇನ್ನೊಂದು ಉಪನ್ಯಾಸದಲ್ಲಿ ಕಾಲೇಜಿನ NSS ವಿಭಾಗದ ಸಂಯೋಜಕ ಡಾ ಕೃಷ್ಣಕುಮಾರ್ ರವರು ಚುನಾವಣಾ ಗುರುತಿನ ಚೀಟಿ ನೋಂದಣಿ ಮತ್ತು ಅದರ ಮಹತ್ವದ ಕುರಿತಾಗಿ ಹೇಳಿದರು. ಮಧ್ಯಾಹ್ನದ ಉಪನ್ಯಾಸ ಮಾಲಿಕೆಯಲ್ಲಿ ಬೆಂಗಳೂರಿನ PENTAGON SPACE ಕಂಪನಿಯ ಸಂಸ್ಥಾಪಕ ಮುಖ್ಯಸ್ಥರಾದ ಶ್ರೀ ಶಶಿ ರವರು ತಮ್ಮ ತಾಂತ್ರಿಕ ಉಪನ್ಯಾಸದಲ್ಲಿ ಆರ್ಟಿಫಿಷಿಯಲ್ ಬುದ್ದಿಮತ್ಯೆ ಮತ್ತು ಮಾನವನ ಬುದ್ದಿಮತ್ಯೆ ಗೆ ಇರು ವ್ಯತ್ಯಾಸಗಳು ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಇರುವು ಮುಂದಿನ ಸವಾಲುಗಳು ಮತ್ತು ಅವುಗಳ ಸಮರ್ಪಕ ನಿರ್ವಹಣೆ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು.
ಎರಡನೆ ದಿನದ ಉಪನ್ಯಾಸಮಾಲಿಕೆಯಲ್ಲಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಸೋಮಶೇಖರಪ್ಪ, ವಿದ್ಯಾರ್ಥಿಗಳಿಗೆ ಕಾನೂನಿನ ಪಾಲನೆ ಮತ್ತು ಅದರ ಮಹತ್ವದ ಬಗ್ಗೆ ವಿವರಿಸಿದರು. ನಂತರ ಮತ್ತೊಂದು ಉಪನ್ಯಾಸದಲ್ಲಿ ಅಂತರ ರಾಷ್ಟ್ರಿಯ ಶಿಕ್ಷಣ ತಜ್ಞ ಮತ್ತು ತರಬೇತುದಾರ ಎ.ಎಚ್. ಸಾಗರ್ ,ಸುದೀರ್ಘ ಉಪನ್ಯಾಸದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಬಗ್ಗೆ ಹಲವಾರು ಮಗ್ಗುಲುಗಳಲ್ಲಿ ವಿವರಿಸಿದರು ಮತ್ತು ವಿದ್ಯಾರ್ಥಿಗಳು ಮುಂದೆ ಹೊಸ ವಿಷಯಗಳ ಕಲಿಕೆಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ಚಿಂತಿಸಬೇಕು.ಪೋಷಕರು ತಮ್ಮ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು ಮತ್ತು ಅವರುಗಳ ಮೇಲೆ ಒತ್ತಡ ಏರುವುದನ್ನು ಕಡಿಮೆಯೇ ಮಾಡಬೇಕೆಂದು ಹೇಳಿದರು.
ಮಧ್ಯಾಹ್ನದ ಉಪನ್ಯಾಸದಲ್ಲಿ ಕಾಲೇಜಿನ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾದಮುಖ್ಯಸ್ಥ ಮತ್ತು ಉದ್ಯೋಗ ವಿಭಾಗದ ಡಾ ಸಿ ಆರ್ ನಿರ್ಮಲ, ತಾಂತ್ರಿಕ ಶಿಕ್ಷಣದಲ್ಲಿ ಉದ್ಯೋಗದ ಮಹತ್ವ ಮತ್ತು ಅದಕ್ಕೆ ರೂಡಿಸಿಕೊಳ್ಳಬೇಕಾದ ಗುಣಗಳು ಮತ್ತು ಕೌಶಲ್ಯಗಳ ಬಗ್ಗೆ ವಿವರಿಸಿದರು ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಅಂತರ್ಜಾಲ ಸಂವಾದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಎಚ್ ಬಿ ಅರವಿಂದ್ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾದ್ಯಾಪಕರು, ವಿದ್ಯಾರ್ಥಿಗಳು ಹಾಗು ಅವರ ಪೋಷಕರು ಭಾಗವಹಿಸಿದ್ದರು.



