ಭದ್ರಾ ಜಲಾಶಯ: ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ ಅಬ್ಬರ; ಜು.08ರ ನೀರಿನ ಮಟ್ಟ ಎಷ್ಟಿದೆ..?

ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ಮಲೆನಾಡು ವ್ಯಾಪ್ತಿಯಲ್ಲಿ ಭರ್ಜರಿ ಮಳೆ ಮುಂದುವರೆದಿದೆ. ನಿನ್ನೆ (ಜು.7) 20 ಸಾವಿರ‌ ಕ್ಯೂಸೆಕ್ ನಷ್ಟಿದ್ದ ಒಳ‌ಹರಿವು, ಇಂದು (ಜು.8) 19,043 ಕ್ಯೂಸೆಕ್ ನಷ್ಟಿದೆ. ಮುಂಗಾರು ಮಳೆ ಪ್ರಾರಂಭವಾಗಿ ಒಂದುವರೆ ತಿಂಗಳಲ್ಲಿಯೇ ಭದ್ರಾ ಜಲಾಶಯ ನೀರಿನ ಮಟ್ಟ 171,10 ಅಡಿಗೆ ತಲುಪಿದೆ. ಈ ಮೂಲಕ ಭರ್ತಿಗೆ ಕೇವಲ 14.1ಅಡಿ ಮಾತ್ರ ಬಾಕಿ ಇದೆ. ಇದು ಅಚ್ಚುಕಟ್ಟು ರೈತರಲ್ಲಿ ಸಂತಸ ತಂದಿದೆ.

ಮುಂಗಾರು ಮಳೆ ಮೇ ಕೊನೆ ವಾರದಲ್ಲಿಯೇ ಪ್ರವೇಶ ಪಡೆದರೂ ಜೂ.12ರಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಭದ್ರಾ ಜಲಾಶಯ ಇಂದಿನ ( ಜು.8) ನೀರಿನ ಮಟ್ಟ 171.10 ಅಡಿ‌ ಇದ್ದು, ಒಳ ಹರಿವು 19,043 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 133.1 ಅಡಿ ನೀರು ಇತ್ತು. ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭದ್ರಾ ಜಲಾಶಯ ಬೇಗನೇ ತುಂಬುವ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.

ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ

  • ದಿನಾಂಕ :08-07-2025
  • ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
  • ಪ್ರಸ್ತುತ ನೀರಿನ ಮಟ್ಟ ; 54,889 ಟಿಎಂಸಿ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 171.10 ಅಡಿ
  • ಒಳ ಹರಿವು :19,043 ಕ್ಯೂಸೆಕ್
  • ಹೊರ ಹರಿವು : 5,201 ಕ್ಯೂಸೆಕ್
  • ಎಡ ದಂಡೆ : 00 ಕ್ಯೂಸೆಕ್
  • ಬಲ ದಂಡೆ : 00 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 133.1 ಅಡಿ
  • ಕಳೆದ ವರ್ಷದ ಇದೇ ದಿನ ಒಳಹರಿವು: 8,777 ಕ್ಯೂಸೆಕ್

 

Dvgsuddi: ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Related Post
Recent Posts