ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ಮಲೆನಾಡು ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ನಿನ್ನೆ (ಜು.03) 20 ಸಾವಿರ ಕ್ಯೂಸೆಕ್ ನಷ್ಟಿದ್ದ ಒಳಹರಿವು, ಇಂದು (ಜು.4) 21,982 ಕ್ಯೂಸೆಕ್ ನಷ್ಟಿದೆ. ಮುಂಗಾರು ಮಳೆ ಪ್ರಾರಂಭವಾಗಿ ಒಂದೇ ತಿಂಗಳಿಗೆ ಭದ್ರಾ ಜಲಾಶಯ ನೀರಿನ ಮಟ್ಟ 167.1 ಅಡಿಗೆ ತಲುಪಿದೆ. ಈ ಮೂಲಕ ಭರ್ತಿಗೆ ಕೇವಲ 19 ಅಡಿ ಬಾಕಿ ಇದೆ. ಇದು ರೈತರಲ್ಲಿ ಸಂತಸ ತಂದಿದೆ.
ಮುಂಗಾರು ಮಳೆ ಮೇ ಕೊನೆ ವಾರದಲ್ಲಿಯೇ ಪ್ರವೇಶ ಪಡೆದರು. ಜೂ.12ರಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಭದ್ರಾ ಜಲಾಶಯ ಇಂದಿನ ( ಜು.3) ನೀರಿನಮಟ್ಟ 167.1 ಅಡಿ ಇದ್ದು, ಒಳ ಹರಿವು 21,982 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 127. 0 ಅಡಿ ನೀರು ಇತ್ತು. ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭದ್ರಾ ಜಲಾಶಯ ಬೇಗನೇ ತುಂಬುವ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :04-07-2025
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 49,839 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 167.1 ಅಡಿ
- ಒಳ ಹರಿವು : 21,882 ಕ್ಯೂಸೆಕ್
- ಹೊರ ಹರಿವು : 3,394 ಕ್ಯೂಸೆಕ್
- ಎಡ ದಂಡೆ : 00 ಕ್ಯೂಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 127.0 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 4,908 ಕ್ಯೂಸೆಕ್
Next Read: ಅಭಿನಯ, ನಿರ್ದೇಶನದ ಉಚಿತ ತರಬೇತಿ »