Connect with us

Dvgsuddi Kannada | online news portal | Kannada news online

ಭದ್ರಾ ಜಲಾಶಯ: ಜೂ.24ರ ಬೆಳಗ್ಗೆ ಹೊತ್ತಿಗೆ ನೀರಿನ ಮಟ್ಟ ಎಷ್ಟಿದೆ..?

bhadra dam dvgsuddi

ದಾವಣಗೆರೆ

ಭದ್ರಾ ಜಲಾಶಯ: ಜೂ.24ರ ಬೆಳಗ್ಗೆ ಹೊತ್ತಿಗೆ ನೀರಿನ ಮಟ್ಟ ಎಷ್ಟಿದೆ..?

ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ಮಲೆನಾಡು ವ್ಯಾಪ್ತಿಯಲ್ಲಿ ಮತ್ತೆ ಮುಂಗಾರು ಮಳೆ ಚುರುಕಾಗಿದೆ. ಇದರಿಂದ ಜಲಾಶಯ ಒಳ‌ಹರಿವು ಇಂದು (ಜೂ.24) ಬೆಳಗ್ಗೆ ಹೊತ್ತಿಗೆ 10,933 ಕ್ಯೂಸೆಕ್ ನಷ್ಟಿದೆ.

ಜೂ.12ರಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು, ಜಲಾಶಯ ಒಳ ಹರಿವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭದ್ರಾ ಜಲಾಶಯಶದ ಇಂದಿನ ( ಜೂ.24) ನೀರಿನಮಟ್ಟ 153.6 ಅಡಿ‌ ಇದ್ದು, ಒಳ ಹರಿವು 10,933 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 119.5ಅಡಿ ನೀರು ಇತ್ತು. ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭದ್ರಾ ಜಲಾಶಯ ಬೇಗನೇ ತುಂಬುವ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.

ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ

  • ದಿನಾಂಕ :24-06-2025
  • ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
  • ಪ್ರಸ್ತುತ ನೀರಿನ ಮಟ್ಟ ; 37,160 ಟಿಎಂಸಿ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 153.6 ಅಡಿ
  • ಒಳ ಹರಿವು : 10,933 ಕ್ಯೂಸೆಕ್
  • ಹೊರ ಹರಿವು : 1,280ಕ್ಯೂಸೆಕ್
  • ಎಡ ದಂಡೆ : 00 ಕ್ಯೂಸೆಕ್
  • ಬಲ ದಂಡೆ : 00 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 119.5ಅಡಿ
  • ಕಳೆದ ವರ್ಷದ ಇದೇ ದಿನ ಒಳಹರಿವು: 782 ಕ್ಯೂಸೆಕ್

ಮುಂಗಾರು ಮಳೆ ಪ್ರಾರಂಭವಾಗಿ 20 ದಿನದಲ್ಲಿಯೇ ಭದ್ರಾ ಜಲಾಶಯ ನೀರಿನ ಮಟ್ಟ 150 ಅಡಿ ದಾಟಿದ್ದು, ರೈತರಲ್ಲಿ ಸಂತಸ ತಂದಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top