ದಾವಣಗೆರೆ: ಭದ್ರಾ ಜಲಾಶಯದ (bhadra dam) ಮಲೆನಾಡು ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಜಲಾಶಯ ಒಳಹರಿವು ಸಹ ಏರಿಕೆಯಾಗಿದೆ. ಇಂದು (ಜೂ.17) ಬೆಳಗ್ಗೆ ಹೊತ್ತಿಗೆ ಒಳ ಹರಿವು 6,999ಕ್ಯೂಸೆಕ್ ನಷ್ಟಿದೆ. ಈ ಮೂಲಕ ಒಂದೇ ದಿನ 3 ಸಾವಿರ ಕ್ಯೂಸೆಕ್ ಹೆಚ್ಚಳವಾಗಿದೆ.
ಮೇ ತಿಂಗಳ ಕೊನೆ ವಾರ ಸತತ ಮಳೆಯಿಂದ ಒಳ ಹರಿವು 8 ಸಾವಿರ ಕ್ಯೂಸೆಕ್ ದಾಟಿತ್ತು. ಆದರೆ, ಮುಂಗಾರು ಮಳೆ ಪ್ರವೇಶ ನಂತರ ಸ್ವಲ್ಪ ಇಳಿಕೆಯಾಗಿತ್ತು. ಜೂ.12 ರಿಂದ ಮತ್ತೆ ಜೋರು ಮಳೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಭದ್ರಾ ಜಲಾಶಯಶದ ಇಂದಿನ ( ಜೂ.16) ನೀರಿನಮಟ್ಟ 145.5 ಅಡಿ ಇದ್ದು, ಒಳ ಹರಿವು 6,999 ಕ್ಯೂಸೆಕ್ ಇದೆ. ಕಳೆದ ವರ್ಷ ಇದೆ ದಿನ 118.11ಅಡಿ ನೀರು ಇತ್ತು. ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರಿ ಬೇಗನೇ ಭದ್ರಾ ಜಲಾಶಯ ತುಂಬುವ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :17-06-2025
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 40,759 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 145.5 ಅಡಿ
- ಒಳ ಹರಿವು : 6,999 ಕ್ಯೂಸೆಕ್
- ಹೊರ ಹರಿವು : 1,270 ಕ್ಯೂಸೆಕ್
- ಎಡ ದಂಡೆ : 00 ಕ್ಯೂಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 118.11ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 551 ಕ್ಯೂಸೆಕ್