Connect with us

Dvgsuddi Kannada | online news portal | Kannada news online

ಭದ್ರಾ ಜಲಾಶಯ ಒಳ ಹರಿವು ಭರ್ಜರಿ ಏರಿಕೆ; 139.6 ಅಡಿ ತಲುಪಿದ ನೀರಿನ ಮಟ್ಟ

bhadra dam dvgsuddi

ದಾವಣಗೆರೆ

ಭದ್ರಾ ಜಲಾಶಯ ಒಳ ಹರಿವು ಭರ್ಜರಿ ಏರಿಕೆ; 139.6 ಅಡಿ ತಲುಪಿದ ನೀರಿನ ಮಟ್ಟ

ದಾವಣಗೆರೆ: ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಇದರಿಂದ ಭದ್ರಾ ಜಲಾಶಯ ( bhadra dam) ಒಳ ಹರಿವು ಮತ್ತಷ್ಟು ಹೆಚ್ಚಾಗಿದೆ. ಇಂದು (ಮೇ 29) ಬೆಳಗ್ಗೆ ಹೊತ್ತಿಗೆ ಒಳ ಹರಿವು ಮತ್ತಷ್ಟು ಹೆಚ್ಚಾಗಿದ್ದು, 8 ಸಾವಿರ ಕ್ಯೂಸೆಕ್ ಗಡಿ ಸಾಟಿದೆ. ಬಿರು ಬೇಸಿಗೆಯಿಂದ ಕುಗ್ಗಿದ್ದ ಒಳ ಹರಿವು ಕಳೆದ ನಾಲ್ಕು ದಿನದಿಂದ ಏರಿಕೆಯಾಗುತ್ತಿದೆ. ಇದರಿಂದ ಭದ್ರಾ ಅಚ್ಚುಕಟ್ಟು ರೈತರಲ್ಲಿ ಸಂತಸ ಮೂಡಿದೆ.

ಭದ್ರಾ ಜಲಾಶಯಶವು ಇಂದಿನ ( ಮೇ‌ 29) ನೀರಿನಮಟ್ಟ 139.6 ಅಡಿ‌ ಇದ್ದು, ಒಳ ಹರಿವು 8,181 ಕ್ಯೂಸೆಕ್ ಇದೆ. ಇನ್ನೂ ಮುಂಗಾರು ಮಳೆ ಅಧಿಕೃತವಾಗಿ ರಾಜ್ಯ ಪ್ರವೇಶಿಸಿಲ್ಲ. ಮುಂಗಾರು ಪೂರ್ವ ಮಳೆಯಿಂದಲೇ ಜಲಾಶಯನಕ್ಕೆ ಜೀವ ಕಳೆ ಬಂದಿದೆ

ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ

  • ದಿನಾಂಕ :29-05-2025
  • ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
  • ಪ್ರಸ್ತುತ ನೀರಿನ ಮಟ್ಟ ; 26.584 ಟಿಎಂಸಿ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 139.6 ಅಡಿ
  • ಒಳ ಹರಿವು : 8,181 ಕ್ಯೂಸೆಕ್
  • ಹೊರ ಹರಿವು : 403 ಕ್ಯೂಸೆಕ್
  • ಎಡ ದಂಡೆ : 80 ಕ್ಯೂಸೆಕ್
  • ಬಲ ದಂಡೆ : 00 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 117.2.1/2 ಅಡಿ
  • ಕಳೆದ ವರ್ಷದ ಇದೇ ದಿನ ಒಳಹರಿವು: 489 ಕ್ಯೂಸೆಕ್

ಭಾನುವಾರ 499 ಕ್ಯೂಸೆಕ್ಸ್ ಇದ್ದ ಒಳಹರಿವು, ಸೋಮವಾರ 2860 ಕ್ಯೂಸೆಕ್ಸ್‌ಗೆ ದಿಢೀರ್ ಹೆಚ್ಚಳ ಕಂಡಿತ್ತು. ಮಂಗಳವಾರ 3034 ಕ್ಯೂಸೆಕ್ ಇತ್ತು. ಬುಧವಾರ 6,778 ಕ್ಯೂಸೆಕ್ ಇತ್ತು. ಇಂದು (ಮೇ 29) ಜಲಾಶಯದ ನೀರಿನಮಟ್ಟ 139.6 ಅಡಿ ಆಗಿದೆ. ಒಳ‌ ಹರಿವು 8,181 ಕ್ಯೂಸೆಕ್ ಇದೆ. 71.54 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲೀಗ 26.548 ಟಿಎಂಸಿ ನೀರು ಸಂಗ್ರಹವಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top