Connect with us

Dvgsuddi Kannada | online news portal | Kannada news online

ಭದ್ರಾ ಜಲಾಶಯ; ಆ.1ರ ಒಳಹರಿವು 56152 ಕ್ಯೂಸೆಕ್, ಹೊರ ಹರಿವು 65724 ಕ್ಯೂಸೆಕ್ ; ನೀರಿನ ಮಟ್ಟ 183’10 ಅಡಿ

ದಾವಣಗೆರೆ

ಭದ್ರಾ ಜಲಾಶಯ; ಆ.1ರ ಒಳಹರಿವು 56152 ಕ್ಯೂಸೆಕ್, ಹೊರ ಹರಿವು 65724 ಕ್ಯೂಸೆಕ್ ; ನೀರಿನ ಮಟ್ಟ 183’10 ಅಡಿ

ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಇದರಿಂದ ಒಳ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು (ಆ.1) 56152 ಕ್ಯೂಸೆಕ್ ಒಳ ಹರಿವಿದ್ದು, ನಿನ್ನೆ (ಜು.29) 61042 ಕ್ಯೂಸೆಕ್ ಇತ್ತು. ನಿನ್ನೆಗೆ ಹೋಲಿಸಿದ್ರೆ 5 ಸಾವಿರ ಕ್ಯೂಸೆಕ್ ನಷ್ಟು ಒಳ‌ಹರಿವು ಇಳಿಕೆಯಾಗಿದೆ. ಈಗಾಗಲೇ ಎಡ ದಂಡೆ ನಾಲೆಗೆ 180 ಕ್ಯೂ ಸೆಕ್ ಮತ್ತು ಬಲ ದಂಡೆ ನಾಲೆಗೆ 1625 ನೀರು ಹರಿಸಲಾಗುತ್ತಿದೆ. ‌ಮುಂಗಾರು ಹಂಗಾಮಿನಲ್ಲಿ 120 ದಿನ ನೀರು ಹರಿಸಲು ಕಾಡಾ ಸಭೆ ನಿರ್ಧಾರ ಕೈಗೊಳ್ಳಲಾಗಿದೆ. ಡ್ಯಾಂ ನ ಗೇಟ್ ಮೂಲಕ 65724 ಕ್ಯೂಸೆಕ್ ನೀರು ನದಿಗೆ ಹೊರ ಬಿಡಲಾಗುತ್ತಿದೆ.

ಡ್ಯಾಂ ಭರ್ತಿಯಾಗಿದ್ದು, ಒಳ ಹರಿವು ಪ್ರಮಾಣದಲ್ಲಿ ಹೊರ ಹರಿವು ಇದೆ. ಕಳೆದ ವರ್ಷ ಇದೇ ದಿನ 5756 ಕ್ಯೂಸೆಕ್ ಒಳ‌‌ಹರಿವು ಇತ್ತು. 162’8 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. ಭದ್ರಾ ಡ್ಯಾಂ ಭರ್ತಿಯಿಂದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ. ಅದರಲ್ಲೂ ಭದ್ರಾವತಿ, ಚನ್ನಗಿರಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ಭತ್ತ ಬೆಳೆಗಾರರಲ್ಲಿ ಕೊನೆ ಗಳಿಗೆಯಲ್ಲಿ ಭತ್ತ ನಾಟಿ ಮಾಡುವ ಅವಕಾಶ ಸಿಕ್ಕಂತಾಗಿದೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿ ಸಹ ಉಕ್ಕಿ ಹರಿಯುತ್ತದೆ. ಜಿಲ್ಲೆಯ ಹೊನ್ನಾಳಿ, ಹರಿಹರ ಭಾಗದಲ್ಲಿ ತುಂಗಭದ್ರಾ ನದಿ ಹಾಯ್ದು ಹೋಗುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಭತ್ತ ನಾಟಿಗೆ ಭರದ ಸಿದ್ಧತೆ ನಡೆಯುತ್ತಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ನಾಲೆಗೆ ನೀರು ಬಿಟ್ಟಿದ್ದರಿಂದ ರೈತರು ಭತ್ತ ನಾಟಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷದ ತೀವ್ರ ಬರಗಾಲದಿಂದ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಈ ಬಾರಿ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿತ್ತದರೂ, ನಂತರದ 20 ದಿನ ಸಂಪೂರ್ಣ ತಗ್ಗಿತ್ತು. ಈಗ ಕಳೆದ 30 ದಿನದಿಂದ ಭಾರೀ ಮಳೆಯಾಗಿ ಒಂದೇ ತಿಂಗಳಲ್ಲಿ ತುಂಬಿದೆ.

ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಆ. 1) ನೀರಿನ ಮಟ್ಟ 183.10 ಅಡಿಯಷ್ಟಿದೆ. ಒಳ ಹರಿವು 56152 ಕ್ಯೂಸೆಕ್‌ ನಷ್ಟಿದೆ.

  • ಭದ್ರಾ ಜಲಾಶಯ ನೀರಿನ ವಿವರ
  • ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
  • ಪ್ರಸ್ತುತ ನೀರಿನ ಮಟ್ಟ ; 68.830 ಟಿಎಂಸಿ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 183.10 ಅಡಿ
  • ಒಳ ಹರಿವು :56152 ಕ್ಯೂಸೆಕ್ (ಜು.31ರಂದು
    61,042 ಕ್ಯೂಸೆಕ್)
  • ಹೊರ ಹರಿವು : 65724 ಕ್ಯೂಸೆಕ್
  • ಎಡ ದಂಡೆ : 180 ಕ್ಯೂಸೆಕ್
  • ಬಲ ದಂಡೆ : 1625 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 162’8 ಅಡಿ
  • ಇದೇ ದಿನ ಕಳೆದ ವರ್ಷದ ಒಳಹರಿವು: 5756 ಕ್ಯೂಸೆಕ್

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top