ಭದ್ರಾ ಜಲಾಶಯ: ಒಳ ಹರಿವು ತೀವ್ರ ಕುಸಿತ; ಇಂದಿನ ನೀರಿನ ಮಟ್ಟ ಎಷ್ಟು..?

ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಮುಂಗಾರು ಮಳೆ ‌ಕುಂಠಿತಗೊಂಡಿದೆ. ಇದರಿಂದ ಭದ್ರಾ ಜಲಾಶಯ ( bhadra dam) ಒಳ ಹರಿವು ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಇಂದು (ಜೂ.05) ಬೆಳಗ್ಗೆ ಹೊತ್ತಿಗೆ ಒಳ ಹರಿವು 1012 ಕ್ಯೂಸೆಕ್ ನಷ್ಟಿದೆ. ಮೇ‌ ತಿಂಗಳ‌ ಕೊನೆ ವಾರ ಸತತ ಮಳೆಯಿಂದ ಒಳ ಹರಿವು 8 ಸಾವಿರ ಕ್ಯೂಸೆಕ್ ದಾಟಿತ್ತು. ಆದರೆ,‌ ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಇಳಿಕೆಯಾಗಿದೆ.

ಭದ್ರಾ ಜಲಾಶಯಶವು ಇಂದಿನ ( ಜೂ.5) ನೀರಿನಮಟ್ಟ 142.9 ಅಡಿ‌ ಇದ್ದು, ಒಳ ಹರಿವು 3,055 ಕ್ಯೂಸೆಕ್ ಇದೆ. ಕಳೆದ ವರ್ಷ ಇದೆ ದಿನ 117.3 ಅಡಿ ಇತ್ತು. ಕಳೆದ ಎರಡ್ಮೂರು ದಿನ ಬಿಡುವು ನೀಡಿದ್ದ ಮಳೆ, ಈ ವಾರ ಮತ್ತೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ

  • ದಿನಾಂಕ :05-06-2025
  • ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
  • ಪ್ರಸ್ತುತ ನೀರಿನ ಮಟ್ಟ ; 28,812 ಟಿಎಂಸಿ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 142.9 ಅಡಿ
  • ಒಳ ಹರಿವು : 1012 ಕ್ಯೂಸೆಕ್
  • ಹೊರ ಹರಿವು : 318 ಕ್ಯೂಸೆಕ್
  • ಎಡ ದಂಡೆ : 50 ಕ್ಯೂಸೆಕ್
  • ಬಲ ದಂಡೆ : 00 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 117.3 ಅಡಿ
  • ಕಳೆದ ವರ್ಷದ ಇದೇ ದಿನ ಒಳಹರಿವು: 445 ಕ್ಯೂಸೆಕ್

Dvgsuddi: ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Related Post
Recent Posts