Connect with us

Dvgsuddi Kannada | online news portal | Kannada news online

ಭದ್ರಾ ಜಲಾಶಯ ಸುತ್ತಮುತ್ತ ಭಾರೀ ಮಳೆ: ಒಳ ಹರಿವು 7,734 ಕ್ಯೂಸೆಕ್ ; ಇಂದಿನ ನೀರಿನ ಮಟ್ಟ 143 ಅಡಿ

ಪ್ರಮುಖ ಸುದ್ದಿ

ಭದ್ರಾ ಜಲಾಶಯ ಸುತ್ತಮುತ್ತ ಭಾರೀ ಮಳೆ: ಒಳ ಹರಿವು 7,734 ಕ್ಯೂಸೆಕ್ ; ಇಂದಿನ ನೀರಿನ ಮಟ್ಟ 143 ಅಡಿ

ಭದ್ರಾವತಿ: ಭದ್ರಾ ಜಲಾಶಯ ಪ್ರದೇಶದ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಡ್ಯಾಂನ ಒಳ ಹರಿವು ಏರಿಕೆಯಾಗಿದೆ. ಇಂದು (ಜು.21) ಬೆಳಗ್ಗೆ 6 ಗಂಟೆ ವೇಳೆಗೆ 7,734 ಕ್ಯೂಸೆಕ್ ಒಳ ಹರಿವಿದೆ. ಇಂದಿನ ನೀರಿನ ಮಟ್ಟ 143 ಅಡಿಯಷ್ಟಿದ್ದು, ಕಳೆದ ವರ್ಷ ಇದೇ ದಿನ 183.2 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಡ್ಯಾಂ ನಿಂದ ನಾಲೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು.

ಈ ವರ್ಷ ನಿರೀಕ್ಷತ ಪ್ರಮಾಣದಲ್ಲಿ ಜೂಬ್ ತಿಂಗಳಲಳಲ್ಲಿ ಮಳೆಯಾಗದ ಹಿನ್ನೆಲೆ‌ ನೀರು ಸಂಗ್ರಹ ಕುಸಿದಿದೆ. ಕಳೆದ ವರ್ಷದ ಈ ದಿನಕ್ಕೆ ಹೋಲಿಸಿದ್ದರೆ 40 ಅಡಿಯಷ್ಟು ನೀರು ಕೊರತೆಯಲ್ಲಿದೆ. ಅರ್ಧ ಮುಂಗಾರು‌ ಮಳೆಗಾಲ ಕಳೆದರೂ ಡ್ಯಾಂನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಭದ್ರಾ ಅಚ್ಚುಕಟ್ಟು ಪ್ರದೇಶ ಭತ್ತ, ಅಡಿಕೆ, ತೆಂಗು, ಮೆಕ್ಕೆಜೋಳ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ.

  • ಡ್ಯಾಂ ನೀರಿನ ಸಂಗ್ರಹದ ವಿವರ
  • ಇಂದಿನ ನೀರಿನ ಮಟ್ಟ 143 ಅಡಿ
  • ಪೂರ್ಣ ನೀರಿನ ಮಟ್ಟ:186 ಅಡಿ
  • ಇಂದಿನ ಸಾಮರ್ಥ್ಯ: 24,810 ಟಿಎಂಸಿ
  • ಒಟ್ಟು ಸಾಮರ್ಥ್ಯ:71.535 ಟಿಎಂಸಿ
  • ಒಳ ಹರಿವು: 7,734 ಕ್ಯೂಸೆಕ್
  • ಒಟ್ಟು ಹೊರ ಹರಿವು: 164 ಕ್ಯೂಸೆಕ್
  • ಬಲದಂಡೆ ನಾಲೆ: 0.00 ಕ್ಯೂಸೆಕ್
  • ಎಡದಂಡೆ ನಾಲೆ: 0.00 ಕ್ಯೂಸೆಕ್
  • ಕಳೆದ ವರ್ಷ ಈ ದಿನ : 183.2 ಅಡಿ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top