ದಾವಣಗೆರೆ: ಭದ್ರಾ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಸ೦ಬ೦ಧಿಸಿದ೦ತೆ ಹರಿಹರ, ಚನ್ನಗಿರಿ, ಹೊನ್ನಾಳಿ ಮತ್ತು ಭದ್ರಾವತಿ ತಾಲ್ಲೂಕಿನಲ್ಲಿ ಭದ್ರಾ ಯೋಜನೆಯ ಮಲೆಬೆನ್ನೂರು ಮತ್ತು ಆನವೇರಿ ಶಾಖಾ ಕಾಲುವೆ ಹಾದು ಹೋಗಿರುವ ಜಮೀನುಗಳಿಗೆ ಸಂಬಂಧ ಪಟ್ಟಂತೆ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ.
ಹರಿಹರ ತಾಲೂಕಿಗೆ ಸಂಬಂಧಿಸಿದಂತೆ ಮಲೆಬೆನ್ನೂರು, ಕನೀನಿನಿ ನಂ.1 ಮತ್ತು 3 ಭದ್ರಾನಾಲಾ ಉಪವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್-ಮೇ 18ರಿಂದ ಮುಕ್ತಾಯವಾಗುವವರೆಗೆ ಚನ್ನಗಿರಿ ತಾಲೂಕಿಗೆ ಸಂಬಂಧಿಸಿದಂತೆ ಬಸವಪಟ್ಟಣ,ಕನೀನಿನಿನಂ.1 ಭದ್ರಾ ನಾಲಾ ಉಪವಿಭಾಗದಸಹಾಯಕ ಕಾರ್ಯಪಾಲಕ ಇಂಜಿನಿಯರ್-ಸರ್ವೇ ಪ್ರಾರಂಭಿಸಿದ ದಿನಾಂಕ ಮೇ 23 ರಿಂದ ಮುಕ್ತಾಯವಾಗುವವರೆಗೆ, ಹೊನ್ನಾಳಿ ತಾಲೂಕಿಗೆ ಸಂಬಂಧಿಸಿದಂತೆ ಬಸವಪಟ್ಟಣ ಮತ್ತು ಸಾನ್ವಿಹಳ್ಳಿ, ಕನೀನಿನಿ ನಂ.1 ಮತ್ತು 4 ಭದ್ರಾ ನಾಲಾ ಉಪ ಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸರ್ವೇ ಪ್ರಾರಂಭಿಸಿದ ದಿನಾಂಕ ಮೇ 16ರಿಂದ ಮುಕ್ತಾಯವಾಗುವವರೆಗೆ, ಭದ್ರಾವತಿ ತಾಲೂಕಿಗೆ ಸಂಬಂಧಿಸಿದಂತೆ ಸಾನ್ವಿಹಳ್ಳಿ, ಕನಿನಿ ನಂ.4 ಭದ್ರಾ ನಾಲಾ ಉಪವಿಭಾಗದ ಸಹಾಯಕಕಾರ್ಯಪಾಲಕ ಇಂಜಿನಿಯರ್ ಸರ್ವೇ ಪ್ರಾರಂಭಿಸಿದ ದಿನಾಂಕ ಮೇ 18ರಿ೦ದ ಮುಕ್ತಾಯವಾಗುವವರೆಗೆ ನಡೆಲಿದೆ ಎಂದು ಮಲೇಬೆನ್ನೂರು ಕಾರ್ಯಪಾಲಕ ಇಂಜಿನಿಯರ್ ಜಿ.ಎಸ್. ಪಾಟೀಲ್ ತಿಳಿಸಿದ್ದಾರೆ.