ದಾವಣಗೆರೆ: ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆ ಪ್ರಯುಕ್ತ ನದಿಗೆ ಜ.27 ರಿಂದ ಫೆ.06 ವರೆಗೆ 5500 ಕ್ಯುಸೆಕ್ ನೀರು ಬಿಡಲು ಭದ್ರಾ ಅಚ್ಚಕಟ್ಟು ಯೋಜನೆ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ.
ಪ್ರತಿ ದಿನ 500 ಕ್ಯುಸೆಕ್ ನಂತೆ ಫೆ. 06 ವರೆಗೆ ಒಟ್ಟು 5500 ಕ್ಯುಸೆಕ್ ಭದ್ರಾ ಡ್ಯಾಂ ನಿಂದ ತುಂಗಾಭದ್ರ ನದಿಗೆ ನೀರು ಬಿಡಲಾಗುವುದು. ಹೀಗಾಗಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ದನ-ಕರು ಮೇಯಿಸುವುದು, ನದಿ ದಂಡೆಯಲ್ಲಿ ಪಂಪ್ ಸೆಟ್ ಅಳವಡಿಸುವ ಕೆಲಸ ಮಾಡುವುದನ್ಬು ನಿಷೇಧಿಸಿದೆ. ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.



