ದಾವಣಗೆರೆ: ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2024-25ನೇ ಸಾಲಿನ ಮುಂಗಾರು ಬೆಳೆಗೆ ನಾಲೆಗೆ ನೀರು ಹರಿಸುವ ಕುರಿತು ಸೋಮವಾರ (ಜು.29) ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ(ಐಸಿಸಿ) ಮಹತ್ವದ ಸಭೆ ಕರೆಯಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಊ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ರಾದ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ 85ನೇ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಚಿಕ್ಕಮಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಹ ಭಾಗವಹಿಸಲಿದ್ದಾರೆ.
ಜು.29 ರಂದು ಸೋಮವಾರ ಬೆಳಗ್ಗೆ 11.00 ಗಂಟೆಗೆ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಕಛೇರಿಯ ಸಭಾಂಗಣ, ಮಲವಗೊಪ್ಪದಲ್ಲಿ ಸಭೆ ಆಯೋಜಿಸಲಾಗಿರುತ್ತದೆ. ಈ ಸಭೆಯಲ್ಲಿ
ಭಾಗವಹಿಸಿ ರೈತರು ಸಲಹೆಗಳನ್ನು ನೀಡಲು ಕೋರಲಾಗಿದೆ. ಸಸ್ಯ ಭದ್ರಾ ಡ್ಯಾಂ ಇಂದು ಬೆಳಗ್ಗೆ 6 ಗಂಟೆ ವೇಳೆಗೆ 174.3 ಅಡಿ ನೀರು ಸಂಗ್ರಹವಾಗಿತ್ತು.
ವಿಷಯ ಸೂಚಿ: 2023-24ನೇ ಸಾಲಿನ 84ನೇ ನೀರಾವರಿ ಸಲಹಾ ಸಮಿತಿ ಸಭೆಯ ನಡವಳಿಗೆ ಅನುಮೋದನೆ ಪಡೆಯುವುದು. ಭದ್ರಾ ಯೋಜನೆಯ ಅಚ್ಚುಕಟ್ಟಿನ 2024-25 ನೇ ಸಾಲಿನ ಮುಂಗಾರು ಬೆಳೆಗೆ ಪ್ರಸ್ತುತ ಜಲಾಶಯದ ನೀರಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀರು ಹರಿಸುವ ಕುರಿತು ಚರ್ಚೆ, ಅಧ್ಯಕ್ಷರ ಅಪ್ಪಣೆಯ ಮೇರೆಗೆ ಇತರೆ ವಿಷಯಗಳ ಚರ್ಚೆ ನಡೆಯಲಿದೆ.