ದಾವಣಗೆರೆ: ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ದಾವಣಗೆರೆ ವ್ಯಾಪ್ತಿಗೆ ಒಳಪಡುವ ರೈತರು ಬೇಸಿಗೆ ಹಂಗಾಮಿನಲ್ಲಿ ತೋಟವನ್ನು ಹೊರತುಪಡಿಸಿ ಇತರೆ ಬೆಳೆ ಬೆಳೆಯದಂತೆ ನೀರಾವರಿ ಇಲಾಖೆ ಸಲಹೆ ನೀಡಿದೆ.
ಪ್ರಸ್ತುತ ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಜಲಾಶಯದ ಎಡದಂಡೆ ಮತ್ತು ಬ¯ದಂಡೆ ನಾಲೆಗಳಿಗೆ 2023-24 ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಭದ್ರಜಲಾಶಯದಿಂದ ನೀರನ್ನು ಹರಿಸಲಾಗುವುದು. ಈಗಾಗಲೇ ಬಲದಂಡೆ ಕಾಲುವೆಗೆ ಜನವರಿ 15 ರಿಂದ ನೀರನ್ನು ಹರಿಸಲಾಗಿದೆ.
ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಜನ ಜಾನುವಾರುಗಳಿಗೆ ಕುಡಿಯಲು ಹಾಗೂ ಬೆಳೆದು ನಿಂತ ತೋಟಗಳಿಗೆ ಮಾತ್ರ ನೀರನ್ನು ಹರಿಸಲಾಗುವುದು. ಅಚ್ಚುಕಟ್ಟಿನ ಪ್ರದೇಶದಲ್ಲಿ ಬೆಳೆದು ನಿಂತಿರುವ ತೋಟಗಾರಿಕೆ ಬೆಳೆಗಳನ್ನು ಹೊರತುಪಡಿಸಿ. ಭತ್ತ ಅಥವಾ ಇತರೆ ಯಾವುದೇ ಬೆಳೆಯನ್ನು ಈ ಹಂಗಾಮಿನಲ್ಲಿ ಬೆಳೆಯದಿರಲು ಭದ್ರಾ ನಾಲಾ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.