ದಾವಣಗೆರೆ: ಭದ್ರಾ ಜಲಾಶಯದ ಬಲದಂಡೆ ನಾಲೆಗೆ ನವೆಂಬರ್ ತಿಂಗಳು ಅಂತ್ಯದವರೆಗೆ ನೀರು ಹರಿಸುವಂತೆ ಶಾಸಕ ಬಿ.ಪಿ.ಹರೀಶ್ ಅವರು, ಬೆಂಗಳೂರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲ ವಾಗಿದ್ದು, ಹಿಂಗಾರು ಮಳೆಯೂ ಬಾರದೇ ರೈತರು ಕಂಗಾಲಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹಲವಾರು ಗ್ರಾಮದ ರೈತರು ಭತ್ತದ ಬೆಳೆ ನಾಟಿ ಮಾಡಿದ್ದು, ರೈತರಿಗೆ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ಇನ್ನೂ 15 ದಿನಗಳ ಕಾಲ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.
ಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಈ ಮನವಿಸಸಲ್ಲಿಸಿದ್ದಾರೆ. ದಾವಣಗೆರೆ, ಹರಿಹರ, ಹಾಗೂ
ಮಲೇಬೆನ್ನೂರು ಭದ್ರ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಭತ್ತ ನಾಟಿ ಮಾಡಿ ಇನ್ನು 15 ದಿನಗಳಲ್ಲಿ ಕಟಾವು ಮಾಡುತ್ತಾರೆ. ಈ ಹಂತದಲ್ಲಿ ಕಾಳುಕಟ್ಟುವ ಸ೦ದರ್ಭ ವಾಗಿರುವುದರಿಂದ ಈ ಭಾಗದ ನಾಲಾ ವ್ಯಾಪ್ತಿಯ ರೈತರಿಗೆ 15 ದಿನಗಳ ನೀರಿನ ಅಗತ್ಯವಿರುತ್ತದೆ. ಹೀಗಾಗಿ ಈ ಭಾಗದ ರೈತರ ಹಿತದೃಷ್ಟಿಯಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಭದ್ರಾ ಜಲಾಶಯ ದಿಂದ ನೀರು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಒತ್ತಾಯಿಸಿದ್ದಾರೆ.