ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದಲೇ ಸಂಪೂರ್ಣ 29.9 ಟಿಎಂಸಿ ನೀರು ತೆಗೆದುಕೊಳ್ಳುವಂತೆ ಸಿಎಂಗೆ ಮನವಿ ಮಾಡಲು ಭದ್ರಾ ಮೇಲ್ದಂಡೆ ಯೋಜನೆ ಪೂರ್ವಭಾವಿ ಸಭೆಯಲ್ಲಿ ನಿರ್ಣಾಯಕ ಕೈಗೊಳ್ಳಲಾಯಿತು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಭದ್ರಾ ಮೇಲ್ದಂಡೆ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಭದ್ರಾ ಮೇಲ್ದಂಡೆ ಯೋಜನೆಗೆಸರಕಾರ ಒಟ್ಟು 29.9 ಟಿ.ಎಂ.ಸಿ ನೀರು ತೆಗೆದುಳ್ಳಲು ತೀರ್ಮಾನ ತೆಗೆದುಕೊಂಡಿದ್ದು, ಅದರಲ್ಲಿ 12.5 ಟಿ.ಎಂ.ಸಿ ನೀರು ಭದ್ರಾಜಲಾಶಯದಿಂದ ಹಾಗೂ ತುಂಗಾ ಜಲಾಶಯದಿಂದ 17. 5 ಟಿ.ಎಂ.ಸಿ ನೀರು ತೆಗೆದುಕೊಳ್ಳಲು ಆದೇಶ ನೀಡಿದೆ. ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಭದ್ರಾ ಅಚ್ಚು ಕಟ್ಟು ಪ್ರದೇಶದ ರೈತರು ಸಮಸ್ಯೆ ಎದುರಿಸಲಿದ್ದಾರೆ, ಆದ್ದರಿಂದ ಸರಕಾರ ಈ ಕೂಡಲೆ ಈ ನಿರ್ಧಾರವನ್ನು ಬದಲಿಸಿ, ತುಂಗಾ ಜಲಾಶಯದಿಂದ ರೈತರಿಗೆ ಉಪಯೋಗವಾಗದೆ ಆಂಧ್ರ ಪ್ರದೇಶಕ್ಕೆ ಹರಿದು ಹೋಗುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿ. ಈ ನೀರನ್ನು ಬಳಸಿಕೊಳ್ಳುವುದರಿಂದ ರೈತರಿಗೆ ಯಾವುದೇ ಸಮಸ್ಯೆ ಇಲ್ಲ ಎಂಬ ಎಲ್ಲಾ ರೈತ ಮುಖಂಡರ ನಿರ್ಣಯದಂತೆ ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಮನವರಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ಶಾಸಕ ಎಸ್.ಎ ರವೀಂದ್ರನಾಥ್ ವಹಿಸಿದ್ದರು. ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ , ಹರಿಹರ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಶಾಂತನ ಗೌಡ ಮಾಜಿ ಶಾಸಕ ಬಸವರಾಜ್ ನಾಯ್ಕ್, ಬಿಪಿ ಹರೀಶ್, ಮಹಾಮಂಡಲದ ಅಧ್ಯಕ್ಷ ವೈ ದ್ಯಾವಪ್ಪ ರೆಡ್ಡಿ ,ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶ್ರೀ ಹೆಚ್.ಆರ್ ಲಿಂಗರಾಜ್ ಶ್ಯಾಮನೂರು,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ , ನಿರ್ದೇಶಕ ಎಂ ಗಿರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ , ಜಿಲ್ಲಾ ಪಂಚಾಯಿತಿ ಸದಸ್ಯಬಿ.ಕರಿಬಸಪ್ಪ, ಬಿ.ಜಿ ನಾಗರಾಜ್, ಎ.ಎಂ ಮಂಜುನಾಥ್ ಸಿರಿಮಗೊಂಡನಹಳ್ಳಿ, ಮತ್ತು ರೈತ ಮುಖಂಡರು ಹಾಜರಿದ್ದರು.