ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ನಾಳೆ (ಮಾ.10) ಬೆಳಿಗ್ಗೆ 9.30 ಕ್ಕೆ ಮಲೆಬೆನ್ನೂರಿನ ನೀರಾವರಿ ಇಲಾಖೆಯಿಂದ ತಮ್ಮ ಅಚ್ಚುಕಟ್ಟು ವ್ಯಾಪ್ತಿಯ ಮಲೇಬೆನ್ನೂರು ಹೋಬಳಿಯಲ್ಲಿ ರೈತರರನ್ನು ಭೇಟಿ ಮಾಡಲಿದ್ದಾರೆ. ಹೋಬಳಿಯ ಕಡನಾಯಕನಹಳ್ಳಿ, ಹೊಳೆಸಿರಿಗೆರೆ, ಕಮಲಾಪುರ ಹಾಗೂ ಭಾನುವಳ್ಳಿ ಮತ್ತು ಹರಿಹರ ತಾಲ್ಲೂಕಿನ ಬೇವಿನಹಳ್ಳಿ, ಬನ್ನಿಕೋಡು, ದೊಡ್ಡಬಾತಿ ಹಾಗೂ ಕಕ್ಕರಗೊಳ್ಳ ಗ್ರಾಮಗಳು ಕೊನೆಯ ಭಾಗಕ್ಕೆ ಸೇರಲಿದ್ದು, ಅಲ್ಲಿನ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.