ದಾವಣಗೆರೆ: ಜಿಲ್ಲೆಯ ಕಾಡಜ್ಜಿ ಮತ್ತು ಮೇಳ್ಳೆಕಟ್ಟೆ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನವಂಬರ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದಾವಣಗೆರೆ: ಮಹಿಳೆ ಗರ್ಭಕೋಶದಲ್ಲಿದ್ದ ಬರೋಬ್ಬರಿ 10.5 ಕೆಜಿ ತೂಕದ ಗಡ್ಡೆ | ಯಶಸ್ವಿ ಶಸ್ತ್ರಚಿಕಿತ್ಸೆ
ರೆಡ್ಡಿ ಕ್ಯಾಂಪ್, ಪುಟಗಾನಾಳು, ಶ್ರಿರಾಮ ನಗರ, ಕಾಡಜ್ಜಿ, ಬಸವಾನಾಳು, ನಾಗರಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಆಲೂರು, ಬಿ.ಜಿ.ಹಳ್ಳಿ, ಸಿದ್ದನೂರು, ಮಲ್ಲಾಪುರ, ಗುಡಾಳು, ಅಣಜಿ, ಕಿತ್ತೂರು, ಕಂದನಕೋವಿ, ಮೆಳ್ಳೆಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ



