ದಾವಣಗೆರೆ: ತೋಟಕ್ಕೆ ಹೋಗಿದ್ದ ರೈತನ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿದ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದದಲ್ಲಿ ನಡೆದಿದೆ.
ನಯಾಜ್ ಅಹಮ್ಮದ್ ಎಂಬ ರೈತ ನ ಮೇಲೆ ಕರಡಿ ದಾಳಿ ಮಾಡಿದೆ. ಮಧ್ಯಾಹ್ನ ನೀರು ಬಿಡಲು ಅಡಿಕೆ ತೋಟಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಗುಡ್ಡದ ಕಡೆಯಿಂದ ಬಂದ ಕರಡಿ, ಏಕಾಏಕಿದಾಳಿ ಮಾಡಿದೆ ತಲೆ, ಬೆನ್ನು, ಪಕ್ಕೆಲುಬು ಹಾಗೂ ಬಲಗಾಲಿನ ತೊಡೆ ಭಾಗಕ್ಕೆ ಕಚ್ಚಿ ಗಾಯವಾಗಿದ್ದು, ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.



