ದಾವಣಗೆರೆ: ಶ್ರೀ ತರಳಬಾಳು ಬೃಹನ್ಮಠದ ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಏ.23 ರಂದು ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರುಶಿ ವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರೊ.ಬಸವನಾಳ ಶಿವಲಿಂಗಪ್ಪ ಸಂಪಾದಿಸಿರುವ ‘ಬಸವಣ್ಣನವರ ಷಟ್ ಸ್ಥಲದ ವಚನಗಳು ಗ್ರಂಥ (ನಾಲ್ಕನೆಯ ಮುದ್ರಣ)ಲೋಕಾರ್ಪಣೆಗೊಳಲಿದೆ.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜರ್ಮನಿಯ ಗೀತಾ ಧರ್ಮಪಾಲ್, ಬೆಂಗಳೂರಿನ ಸುಧಾ ಸೀತಾರಾಮನ್,
ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ
ಶ್ರೀಮತ್ ಸದ್ಧರ್ಮ ಸಾಧು ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾಂತ ಮಟ್ಟಿ ಭಾಗಹಿಸಲಿದ್ದಾರೆ. ತುಮಕೂರಿನ ಚಿ೦ತಕ ಡಾ.ನಟರಾಜ ಎಸ್.ಬೂದಾಳು ಬಸವಣ್ಣನವರ ವಚನಗಳಲ್ಲಿ ಸಮಾನತೆಯ ಆಶಯಗಳು ಕರಿತು ಉಪನ್ಯಾಸ ನೀಡಲಿದ್ದಾರೆ.ಶ್ರೀ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿವೃದ್ಧಿ ಪಡಿಸಿರುವ ‘ಶಿವಶರಣರ ವಚನ ಸಂಪುಟ ತಂತ್ರಾಂಶ ಅಂತರ್ಜಾಲ ತಾಣ ಪ್ರಾತ್ಯಕ್ಷಿಕೆ’ ಇರುತ್ತದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.



