ದಾವಣಗೆರೆ: ಫೆ.28 ರಂದು ಸಂಜೆ 6ಗಂಟೆಗೆ ತಾಲ್ಲೂಕಿನ ಆವರಗೊಳ್ಳದ ಶ್ರೀವೀರಭದ್ರೇಶ್ವರ ಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ನಾಳೆಯಿಂದ (ಫೆ.23) ಮಾರ್ಚ್ 2ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.23ರಂದು ನಂದಿ ಧ್ವಜಾರೋಹಣದ ನಂತರ ಸ್ವಾಮಿಯ ಮೆರವಣಿಗೆ, ಹರಿದ್ರಾಲೇಪನ,ಕಂಕಣಧಾರಣೆ ಮೂಲಕ ವಿದ್ಯುಕ್ತ ಚಾಲನೆ ಸಿಗಲಿದೆ.
ಫೆ. 24ರಂದು ಬಸವೇಶ್ವರ ಆರೋಹಣ ಉತ್ಸವ, ಫೆ. 25ರಂದು ಸರ್ಪಾರೋಹಣ ಉತ್ಸವ, 26ರಂದು ರಥಕ್ಕೆ ಕಳಸಾರೋಹಣ ಹಾಗೂ ಅಶ್ವಾರೋಹಣ ನೆರವೇರಲಿದೆ. ಫೆ.27ರಂದು ದೊಡ್ಡಬಾತಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಬೀರಲಿಂಗೇಶ್ವರ ಸ್ವಾಮಿಯ ಆಗಮನವಾಗಲಿದೆ. ತೇರುಮನೆ
ಚೌಡೇಶ್ವರಿ ದೇವಸ್ಥಾನ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ಫೆ.28ರಂದು ಸಂಜೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯಮಹಾರಥೋತ್ಸವ ನೆರವೇರಲಿದೆ. ಫೆ. 29 ಸ್ವಾಮಿಯ ಗುಗ್ಗುಳ ಸೇವೆ,ಓಕುಳಿ ಸೇವೆ ಹಾಗೂ ಗಂಗಾಪೂಜೆ ನೆರವೇರಲಿದೆ. ನಂತರ ವೀರಗಾಸೆ ಸೇವೆ ನಡೆಯಲಿದ್ದು, ಮಾರ್ಚ್ 1ರಂದು ಗುಗ್ಗಳದೊಂದಿಗೆ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಲಿದೆ. ಮಾ.2ರಂದು ಕಂಕಣ ವಿಸರ್ಜನೆಕಾರ್ಯಕ್ರಮವಿದೆ ನಡೆಯಲಿದೆ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ ಸೇವಾ ಸಂಘ ತಿಳಿಸಿದೆ.



