ದಾವಣಗೆರೆ: ವಿಧಾನಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ 164 ನಾಮ ಪತ್ರಗಳಲ್ಲಿ ಅಧಿಕಾರಿಗಳ ಪರಿಶೀಲನೆ ನಂತರ 7 ಕ್ಷೇತ್ರಗಳಿಂದ ಅಭ್ಯರ್ಥಿಗಳ 106 ನಾಮಪತ್ರಗಳು ಕ್ರಮಬದ್ಧವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಅತಿ ಹೆಚ್ಚು 23 ಅಭ್ಯರ್ಥಿಗಳು ನಾಮಪತ್ರ ಸ್ವೀಕೃತವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿವಾನಂದ ಕಾಪತಿ ತಿಳಿಸಿದ್ದಾರೆ.
ಮೇ 10 ರಂದು ನಡೆಯುವ ಚುನಾವಣೆಗೆ ಏ.13ರಿಂದ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಜಿಲ್ಲೆಯ 7 ಕ್ಷೇತ್ರಗಳಿಗೆ ಒಟ್ಟು 164 ನಾಮಪತ್ರ ಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ 153 ಪುರುಷ ಹಾಗೂ 11 ಮಹಿಳೆಯರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆ ನಂತರ 99 ಪುರುಷರು, 7ಮಹಿಳಾ ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟು ಕ್ರಮಬದ್ಧವಾದ ನಾಮ ಪತ್ರಗಳಲ್ಲಿ ಬಿಜೆಪಿ 7, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 7, ಆಮ್ ಆದ್ಮ ಪಕ್ಷದ 6, ಬಿಎಸ್‌ಪಿ4, ಜೆಡಿಎಸ್ ಪಕ್ಷದ 7, ಇತರೆ ಪಕ್ಷಗಳ 20 ಹಾಗೂ 55 ಪಕ್ಷೇತರ ಅಭ್ಯರ್ಥಿಗಳ ನಾಮ ಪತ್ರಗಳಿವೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ ಕ್ರಮಬದ್ಧವಾಗಿರದ 9 ನಾಮಪತ್ರಗಳು ತಿರಸ್ಕೃತವಾಗಿವೆ. ಹರಿಹರ ಕ್ಷೇತ್ರದ1, ಮಾಯಕೊಂಡ ಕ್ಷೇತ್ರದ7, ಚನ್ನಗಿರಿ ಕ್ಷೇತ್ರದ 1 ನಾಮಪತ್ರ ಸೇರಿವೆ.
- ಕ್ಷೇತ್ರವಾರು ವಿವರ
- ಜಗಳೂರು: ಬಿಜೆಪಿ 1, ಕಾಂಗ್ರೆಸ್ 1, ಜೆಡಿಎಸ್ 1, ಇತರೆ ಪಕ್ಷ 1 ಮತ್ತು ಪಕ್ಷೇತರ 8
ಅಭ್ಯರ್ಥಿಗಳು ಸೇರಿ ಒಟ್ಟು 12 ನಾಮಪತ್ರ ಸ್ವೀಕೃತ - ಹರಿಹರ; ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದಿ ಪಕ್ಷ 1, ಬಿಎಸ್‌ಪಿ 1, ಜೆಡಿಎಸ್ 1, ಇತರೆ ಪಕ್ಷ 2, ಪಕ್ಷೇತರ 5 ಸೇರಿ 12 ನಾಮಪತ್ರ ಸ್ವೀಕೃತ
- ದಾವಣಗೆರೆ ಉತ್ತರ; ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮ ಪಕ್ಷ 1, ಜೆಡಿಎಸ್ ಪಕ್ಷ
1, ಇತರೆ ಪಕ್ಷ 3, ಪಕ್ಷೇತರ 9 ಸೇರಿ 16 ನಾಮಪತ್ರ ಸ್ವೀಕೃತ - ದಾವಣಗೆರೆ ದಕ್ಷಿಣ: ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮ ಪಕ್ಷ 1, ಬಿಎಸ್‌ಪಿ 1,
ಜೆಡಿಎಸ್ 1, ಇತರೆ ಪಕ್ಷ5, ಪಕ್ಷೇತರ 13 ಸೇರಿ 23 ನಾಮಪತ್ರ - ಮಾಯಕೊಂಡ; ಬಿಜೆಪಿ1, ಕಾಂಗ್ರೆಸ್1, ಆಮ್ ಆದ್ಮಪಕ್ಷ1, ಜೆಡಿಎಸ್1, ಇತರೆ
ಪಕ್ಷ4, ಪಕ್ಷೇತರ 9 ಸೇರಿ 17 ನಾಮಪತ್ರಗಳು ಸಲ್ಲಿಕೆ - ಚನ್ನಗಿರಿ; ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮ ಪಕ್ಷ 1, ಬಿಎಸ್‌ಪಿ 1, ಜೆಡಿಎಸ್
1, ಇತರೆ ಪಕ್ಷ 3, ಪಕ್ಷೇತರ 6 ಸೇರಿದಂತೆ ಒಟ್ಟು 14 ನಾಮಪತ್ರ ಸ್ವೀಕೃತ - ಹೊನ್ನಾಳಿ: ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮ ಪಕ್ಷ, ಬಿಎಸ್‌ಪಿ1, ಜೆಡಿಎಸ್, ಇತರೆ
ಪಕ್ಷ 2, ಪಕ್ಷೇತರ 5 ಸೇರಿ ಒಟ್ಟು 12 ನಾಮಪತ್ರ



