ದಾವಣಗೆರೆ; ಬಿಜೆಪಿಯ ಭದ್ರಕೋಟೆಯಾದ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿಯೇ ಬಿಜೆಪಿ ಧೂಳೀಪಟವಾಗಿದ್ದು, ಜಿಲ್ಲೆಯ 7 ಕ್ಷೇತ್ರದಲ್ಲಿ ಕಾಂಗ್ರೆಸ್ 6ರಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 1 ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟಿದೆ. 2018 ರಲ್ಲಿ ಬಿಜೆಪಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ 5 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ 2 ಸ್ಥಾನ ಪಡೆದಿತ್ತು.
- ಜಿಲ್ಲೆಯಲ್ಲಿ ಈ ಬಾರಿ ಗೆಲುವು ಸಾಧಿಸಿದ ಅಭ್ಯರ್ಥಿಗಳು
- ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್)
- ದಾವಣಗೆರೆ ಉತ್ತರ- ಎಸ್.ಎಸ್. ಮಲ್ಲಿಕಾರ್ಜನ (ಕಾಂಗ್ರೆಸ್)
- ಹೊನ್ನಾಳಿ- ಡಿ.ಜಿ. ಶಾಂತನಗೌಡ (ಕಾಂಗ್ರೆಸ್)
- ಚನ್ನಗಿರಿ- ಶಿವಗಂಗಾ ವಿ. ಬಸವರಾಜ (ಕಾಂಗ್ರೆಸ್)
- ಜಗಳೂರು- ದೇವೇಂದ್ರಪ್ಪ (ಕಾಂಗ್ರೆಸ್)
- ಹರಿಹರ- ಬಿ.ಪಿ.ಹರೀಶ್ (ಬಿಜೆಪಿ)
ದಾವಣಗೆರೆ ದಕ್ಷಿಣದಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಗೆಲುವು ಸಾಧಿಸಿದ್ದಾರೆ. ಪ್ರತಿ ಸ್ಪರ್ಧೆ ನೀಡಿದ ಬಿಜೆಪಿ ಹೊಸ ಮುಖ ಲೋಕಿಕೆರೆ ನಾಗರಾಜ್ ಅವರನ್ನು ಸೋಲಿಸಿದ್ದಾರೆ. ಇನ್ನೂ ದಾವಣಗೆರೆ ಉತ್ತರದಿಂದ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಗೆಲುವು ಸಾಧಿಸಿದ್ದಾರೆ. ಇಲ್ಲಿ ಬಿಜೆಪಿಯ ಹೊಸ ಮುಖ ಅಜಯ್ ಕುಮಾರ್ ಸೋತಿದ್ದಾರೆ.
ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ.ಪಿ.ಹರೀಶ್ ಗೆಲುವು ಸಾಧಿಸಿದ್ದಾರೆ. ಪ್ರತಿ ಸ್ಪರ್ಧಿ ಹೊಸ ಮುಖ ಕಾಂಗ್ರೆಸ್ ನ ನಂದಿಗಾವಿ ಶ್ರೀನಿವಾಸ್ ಗೆ ಸೋಲಾಗಿದೆ. ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಗೆ ಸೋಲಾಗಿದೆ. ಕಾಂಗ್ರೆಸ್ ನ ಶಾಂತನಗೌಡ ಗೆ ಭರ್ಜರಿ ಜಯ ಗಳಿಸಿದ್ದಾರೆ. ಚನ್ನಗಿರಿಯಲ್ಲಿ ಕಾಂಗ್ರೆಸ್ ಹೊಸ ಮುಖ ಶಿವಗಂಗಾ ವಿ. ಬಸವರಾಜ್ ಗೆಲುವು ಸಾಧಿಸಿದ್ದಾರೆ. ಇಲ್ಲಿ ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಗೆ ಸೋಲಾಗಿದೆ. ಹಾಗೆಯೇ ಜಗಳೂರಲ್ಲಿ ಹೊಸ ಮುಖ ದೇವೇಂದ್ರಪ್ಪ ಗೆಲುವು ಸಾಧಿಸಿದ್ದು, ಬಿಜೆಪಿಯ ಎಸ್. ವಿ.ರಾಮಚಂದ್ರ ಸೋತಿದ್ದಾರೆ.



