ದಾವಣಗೆರೆ: ಮತದಾನ ಮಾಡಲು ದೂರದ ಅಮೆರಿಕಾದಿಂದ ದಾವಣಗೆರೆ ಬಂದಿದ್ದ ರಾಘವೇಂದ್ರ ಕಮಲಕರ್ ಎಂಬವರು, ಮತಪಟ್ಟಿಯಲ್ಲಿ ಹೆಸರಿಲ್ಲದಕ್ಕೆ ಮತದಾನದಿಂದ ವಂಚಿತರಾಗಿದ್ದಾರೆ. ಇದರಿಂದ ನಿರಾಸೆಗೊಂಡು ಮತ ಚಲಾಯಿಸದೇ ಮನೆಗೆ ತೆರಳಿದ ಘಟನೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಂಸಿಸಿ ಎ ಬ್ಲಾಕ್ ನ ಬಕ್ಕೇಶ್ವರ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.
ಅಮೆರಿಕಾದ ಟೆಕ್ಸಾಸ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕಮಲಕರ್, ದಾವಣಗೆರೆಗೆ ಮತದಾನ ಮಾಡುವ ಸಲುವಾಗಿ 1.50 ಲಕ್ಷ ರೂ. ಖರ್ಚು ಮಾಡಿಕೊಂಡು ಬಂದಿದ್ದರು. ಆದರೆ, ಮತಪಟ್ಟಿಯಲ್ಲಿ ಹೆಸರಿಲ್ಲದೆ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗಿಲ್ಲ.
ಈ ವೇಳೆ ಮಾತನಾಡಿದ ಅವರು, ಅಮೆರಿಕಾದಲ್ಲಿ ಐಡಿ ಕಾರ್ಡ್ ಇದ್ರೆ ಮತದಾನಕ್ಕೆ ಅವಕಾಶ ಇದೆ. ಆದರೆ ಭಾರತದಲ್ಲಿ ನನಗೆ ಐಡಿ ಕಾಡ್೯ ಇದ್ದರೂ ಮತಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ನಾನು ಈ ಬಾರಿ ಮತದಾನದಿಂದ ವಂಚಿತನಾಗಿದ್ದೇನೆ. ಈವರೆಗೂ ನಡೆದ ಎಲ್ಲಾ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಆದರೆ ಈ ಬಾರಿ ಮತದಾನದಿಂದ ವಂಚಿತನಾಗಿದ್ದೇನೆ ಎಂದರು.



