Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದಿನ ರಾಶಿ ಅಡಿಕೆ ದರ ಎಷ್ಟಿದೆ..? ಇಲ್ಲಿದೆ ಮಾಹಿತಿ

ಪ್ರಮುಖ ಸುದ್ದಿ

ದಾವಣಗೆರೆ: ಇಂದಿನ ರಾಶಿ ಅಡಿಕೆ ದರ ಎಷ್ಟಿದೆ..? ಇಲ್ಲಿದೆ ಮಾಹಿತಿ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯಲ್ಲಿ (arecanut rate) ಹೊಸ ವರ್ಷದಿಂದ ಸತತ ಏರಿಕೆ ಕಾಣುತ್ತಿದೆ. 2023 ವರ್ಷದ ಕೊನೆ ತಿಂಗಳಲ್ಲಿ ಬೆಲೆ ಏರಿಕೆ‌‌ ಕಂಡಿದ್ದು, 2024ರ ಹೊಸ ವರ್ಷದಲ್ಲೂ ಸಹ ಏರಿಕೆ ಮುಂದುವರೆದಿದೆ. ಈ ದರ ಇನ್ನಷು ಹೆಚ್ಚಳವಾಗುವ ಸಾಧ್ಯತೆ ಇದ್ದು, ಸ್ವಲ್ಪ‌ ದಿನ ಅಡಿಕೆ ಇಟ್ಟು ಮಾರಾಟ ಮಾಡುವವರಿಗೆ ಒಳ್ಳೆಯ ರೇಟ್ ಸಿಗಲಿದೆ. ಇಂದು (ಜ.5) ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 48,969 ರೂಪಾಯಿ ಇದ್ದು, ಕನಿಷ್ಠ ಬೆಲೆ 43,000 ರೂ.ಗಳಾಗಿದೆ.

2023 ರಲ್ಲಿ ಸಾಕಷ್ಟು ಏರಿಳಿತ ಕಂಡಿದ್ದರೂ, ವರ್ಷದ ಕೊನೆ ತಿಂಗಳಲ್ಲಿ ಮತ್ತೆ ಏರಿಕೆಯಾಗಿದ್ದು, ರೈತರಲ್ಲಿ ಸಂತಸ ಮೂಡಿದೆ. 2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್‌ ಮೊದಲ 15 ದಿನ ‌46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ‌ಕೊನೆಯ ವಾರ ಮತ್ತೆ 47,800 ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು.ಇದೀಗ 2024 ಜನವರಿ ತಿಂಗಳಲ್ಲಿ 49 ಸಾವಿರ ಗಡಿ ತಲುಪಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜ.05ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 43,000ರೂ, ಗರಿಷ್ಠ ಬೆಲೆ 48,969 ಹಾಗೂ ಸರಾಸರಿ ಬೆಲೆ 48,213 ರೂ.ಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 38,179 ರೂ‌.ಗೆ ಮಾರಾಟವಾಗಿದೆ.

 

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top