ದಾವಣಗೆರೆ: ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ಏ.08 ರಿಂದ ಅರ್ಜಿಗಳನ್ನು ವೆಬ್‍ಸೈಟ್ http://davanagere.nic.in ಮುಖಾಂತರ ಆನ್ ಲೈನ್ ನಲ್ಲಿ ಸಲ್ಲಿಸಬಹುದು. ಮೇ.07 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಹರಿಹರ ತಾಲ್ಲೂಕಿನಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಸ್ಥಳ ಹಾಗೂ ಮೀಸಲಾತಿ ವಿವರ ಇಂತಿದೆ. ಧೂಳೆಹೊಳೆ-ಎ, ಕೊಕ್ಕನೂರು-ಬಿ, ಹರಳಹಳ್ಳಿ, ರಾಮತೀರ್ಥ, ಬೆಳ್ಳೂಡಿ-ಬಿ. ಹರಿಹರ ನಗರದ ಗಂಗನಗರ-ಎ, ನಾಲಾಮೊಹಲ್ಲಾ ಅಂಗನವಾಡಿ ಕೇಂದ್ರ, ಮೀಸಲಾತಿ ‘ಇತರೆ’ ವರ್ಗ. ನಗರಸಭೆ ವಾರ್ಡ್ ಸಂ. 3 ರಲ್ಲಿನ ಆಶ್ರಯ ಕಾಲೋನಿ- ಎಸ್.ಸಿ. ಅರ್ಜಿ ಸಲ್ಲಿಸಲು ಮೇ. 07 ಕೊನೆಯ ದಿನವಾಗಿದೆ ಎಂದು ಹರಿಹರ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.



