ದಾವಣಗೆರೆ: ರಾಮ ರಾಮ ಎಂದು ನುಡಿಧೀತ್ತಲೆ ಮುತೈದೆಯರಿಗೆ ಮಹಾತಾಯಿ ಉಡಿ ತುಂಬಿಯಾಳಲೆ ನರಲೋಕದ ಜನಕೆ ಆನೆ ಕಿರೀಟ ಇಟ್ಟಿತಲೆ ಮಹಾತಾಯಿ ಬೇರುಸೊಪ್ಪು ಬೇಸಿತ್ತಲೆ ಎಚ್ಚರ…! ಇದು ಐತಿಹಾಸಿಕ ಪ್ರಸಿದ್ಧ ಶ್ರೀ ಕ್ಷೇತ್ರ ಆನೆಕೊಂಡ ಗ್ರಾಮದ ಬಸವೇಶ್ವರ ಜಾತ್ರೆಯ ಈ ಬಾರಿಯ ಕಾರ್ಣಿಕ.
ಶ್ರಾವಣಮಾಸದ ಕಡೇ ಸೋಮವಾರದ ಪ್ರಯುಕ್ತ ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ಣಿಕ ಮತ್ತು ಜಾತ್ರಾ ಮಹೋತ್ಸವಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು. ಇದೇ ವೇಳೆ ಲೋಕ ಕಲ್ಯಾಣಕೆ ವಿಶೇಷ ಪೂಜೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ದೇವರಿಗೆ ಪೂಜೆ ಸಲ್ಲಿಸಿ ಜಾತ್ರೆ ಮಹೋತ್ಸವ ಕಣ್ತುಂಬಿಕೊಂಡರು. ಬೆಳಗ್ಗೆಯಿಂದಲೇ ಭಕ್ತರು ಹರಿದು ಬರುತ್ತಿದ್ದು, ಸಂಜೆ ಕಾರ್ಷಿಕ ವೇಳೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಜಾತ್ರೆಯು ಅದ್ಧೂರಿಯಾಗಿ ಸಂಭ್ರಮದಿಂದ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಸದಸ್ಯರು, ಗೌಡ್ರು ಅಜ್ಜಪ್ಪ, ಆನೆಕೊಂಡ ನಾಗರಾಜ್, ಕುಮಾರ್,ಮಂಜುನಾಥ್, ಗೌಡ್ರು ಸುರೇಶ್, ಅಪಾರ ಸಂಖ್ಯೆ ಭಕ್ತದಿಗಳು ಉಪಸ್ಥಿತರಿದ್ದರು.



