ದಾವಣಗೆರೆ: ತೀವ್ರ ಬರ ಜಿಲ್ಲೆಯಲ್ಲಿ ಆವರಿಸಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಬೋರ್ ವೆಲ್ ಗಳು ಬತ್ತಿ ಹೋಗಿದ್ದು, ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗದೆ ಅಸಹಾಯಕನಾದ ರೈತನೊಬ್ಬ ತಾನೇ ಸಾಕಿ ಬೆಳೆಸಿದ ಅಡಿಕೆ ತೋಟವನ್ನು ನಾಶ ಮಾಡಿದ್ದಾನೆ.
ಮಾಯಕೊಂಡ ಹೋಬಳಿಯ ಹೊನ್ನನಾಯಕಹಳ್ಳಿ ಗ್ರಾಮದ ರೈತ ಬಸವರಾಜಪ್ಪ ತೋಟ ನಾಶ ಮಾಡಿದ ರೈತನಾಗಿದ್ದಾನೆ. ಎರಡೂವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ 9 ಕೊಳವೆಬಾವಿ ಕೊರೆಸಿದರೂ ನೀರು ಬಿದ್ದಿರಲಿಲ್ಲ. ಅಡಿಕೆ ತೋಟ ಸಂಪೂರ್ಣ ಒಣಗಿ ಹೋಗಿತ್ತು. ಇದರಿಂದ ಮನನೊಂದಿದ್ದ ರೈತ ಫಲಕ್ಕೆ ಬಂದಿದ್ದ ಎರಡೂವರೆ ಎಕರೆ ಅಡಕೆ ತೋಟವನ್ನು ಕಡಿದು ಹಾಕಿದ್ದಾನೆ.
ಇನ್ನೊಂದು ವರ್ಷ ತೋಟ ಉಳಿಸಿದರೆ ಅಡಕೆ ಫಲ ನೀಡುತ್ತಿತ್ತು, ಆದರೆ, ಬೋರ್ ವರಲ್ ನೀರು ಸಿಗದೆ ಬೇಸತ್ತ ರೈತ ಅಡಕೆ ಗಿಡಗಳನ್ನು ಕಡಿದು ಹಾಕಿದ್ದಾನೆ. ಒಟ್ಟು 9 ಬೋರ್ ಹಾಕಿಸಿದೆ, ಒಂದರಲ್ಲೂ ನೀರು ಬರಲಿಲ್ಲ. 6 ಮೋಟಾರುಗಳಿವೆ, ಕೇಬಲ್, ಪೈಪ್‌ಗಾಗಿ 6-7 ಲಕ್ಷ ರೂ. ಸಾಲ ಮಾಡಿ ಪ್ರಯತ್ನಿಸಿದರೂ ನೀರು ಸಿಕ್ಕಿಲ್ಲ. ಕೊನೆಗೆ ಅನಿವಾರ್ಯವಾಗಿ ಗಿಡಗಳನ್ನು ಕಡಿಸಿದ್ದೇನೆ ಎಂದು ಬಸವರಾಜಪ್ಪ ಅಳಲು ತೋಡಿಕೊಂಡಿದ್ದಾನೆ.



