ದಾವಣಗೆರೆ: ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃ*ತಪಟ್ಟಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಈ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಹಾಗೂ ಕುದುರೆಗುಂಡಿ ನಡುವೆ ಇಂದು (ಸೆ.26) ನಡೆದಿದೆ.
ನ್ಯಾಮತಿಯ ಮಾಲತೇಶ್ (25) ಹಾಗೂ ಕುದುರೆಗುಂಡಿಯ ಶೌರ್ಯ (18) ಸಾವನ್ನಪ್ಪಿದವರು. ಮಂಜಮ್ಮ ಹಾಗೂ ಮುನಿಯ ಗಂಭೀರವಾಗಿ ಗಾಯಗೊಂಡಿದ್ದು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶೌರ್ಯ ಹಾಗೂ ಮಂಜಮ್ಮ ದ್ವಿಚಕ್ರ ಬೈಕ್ ನಲ್ಲಿ ಸುರಹೊನ್ನೆಯತ್ತ ಬರುತ್ತಿದ್ದರು. ಮಾಲತೇಶ್ ಹಾಗೂ ಮುನಿಯ ಕುದುರೆಗುಂಡಿ ಕಡೆಗೆ ಬರುವಾಗ ಈ ಘಟನೆ ನಡೆದಿದೆ. ಅತೀ ವೇಗವಾಗಿ ಚಾಲನೆಯೇ ಮುಖಾಮುಖಿ ಡಿಕ್ಕಿಗೆ ಕಾರಣವಾಗಿದೆ. ಬೈಕ್ ಚಾಲನೆ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರರು ಗಾಯಗೊಂಡಿದ್ದಾರೆ.



