ದಾವಣಗೆರೆ: ಚನ್ನಗಿರಿ-ದಾವಣಗೆರೆ ಮುಖ್ಯ ರಸ್ತೆಯ ಆರನೇಕಲ್ಲು ಗ್ರಾಮದ ಬಳಿ ಅಪಘಾತ (Accident) ಸಂಭವಿಸಿದ್ದು, ಖಾಸಗಿ ಬಸ್ ವೊಂದು ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಮನೆಗೆ ನುಗ್ಗಿರುವ ಘಟನೆ ನಿನ್ನೆ (ಜ.30) ತಡ ರಾತ್ರಿ ನಡೆದಿದೆ.
ದಾವಣಗೆರೆ ಕಡೆಯಿಂದ ಚನ್ನಗಿರಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಕೊಂದು ಬೈಕ್ ಡಿಕ್ಕಿ ಹೊಡೆದು ನಂತರ ರಸ್ತೆಯ ಪಕ್ಕದಲ್ಲಿದ್ದ ಮನೆಗೆ ನುಗ್ಗಿದೆ. ಬಸ್ ಡಿಕ್ಕಿಯ ಹೊಡೆತಕ್ಕೆ ಬೈಕ್ ಸವಾರರು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಚನ್ನಗಿರಿ ಮುಖ್ಯ ರಸ್ತೆಯ ಆರನೇಕಲ್ ಬಳಿ ಘಟನೆ ನಡೆದಿದ್ದು, ಹದಡಿಗ್ರಾಮದ ರಾಮಪ್ಪ. (40) ಹಾಗೂ ರಾಜು. (38) ಮೃತರು ಎನ್ನಲಾಗಿದ್ದು, KA.25 C 4443 ನಂಬರ್ ಖಾಸಗಿ ಬಸ್ ದಾವಣಗೆರೆ ಯಿಂದ ಚನ್ನಗಿರಿ ಕಡೆ ಚಲಿಸುತ್ತಿದ್ದ ಬಸ್ KA17 ER 8189 ನಂಬರ್ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಮೃತಪಟ್ಟ ಬೈಕ್ ಸವಾರರು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಮನೆಗೆ ಡಿಕ್ಕಿ ಹೊಡೆದ ಬಸ್ ಸಂಪೂರ್ಣ ಜಖಂ ಆಗಿದ್ದು, ಮನೆ ಗೋಡೆ ಕುಸಿದು ಬಿದ್ದಿದೆ. ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.