ದಾವಣಗೆರೆ; ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ಬಪ್ಪಿದ ಘಟನೆ ದಾವಣಗೆರೆ ನಗರದ ಎಲೇಬೆತೂರು ರಸ್ತೆಯಲ್ಲಿ ನಡೆದಿದೆ.
ವಿಜಯನಗರದ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿ ಗ್ರಾಮದ ಹನುಮಂತಪ್ಪ (33) ಮೃತ ಕಾರ್ಮಿಕನಾಗಿದ್ದಾನೆ. ಕೂಲಿ ಕೆಲಸಕ್ಕೆ ಬಂದಿದ್ದ ಹನುಮಂತಪ್ಪ ಸಂಜೆ ಕೆಲಸ ಮುಗಿಸಿಕೊಂಡು ಎಲೇಬೇತೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿ ದಾವಣಗೆರೆ ಕಡೆ ನಡೆದುಕೊಂಡು ಬರುವಾಗ ಟಿಪ್ಪರ್ ಲಾರಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ತಲೆ ಮೇಲೆ ಲಾರಿ ಗಾಲಿ ಹತ್ತಿದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



