ದಾವಣಗೆರೆ: ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಬಳಿ ಕಾರೊಂದು ಧಗಧಗನೆ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ. ಕ ಆಕಸ್ಮಿಕವಾಗಿ ಹೊತ್ತಿದ ಬೆಂಕಿ ಕಂಡ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಭಯದಿಂದ ಸ್ವಲ್ಪ ದೂರದಲ್ಲಿಯೇ ವಾಹನ ನಿಲ್ಲಿಸಿ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಕಾರು ಹೊತ್ತಿ ಉರಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಹದಡಿ ರಸ್ತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಬಿಸಿಲಿನ ತಾಪಮಾನಕ್ಕೆ ಆಗಿದೆಯೋ ಅಥವಾ ತಾಂತ್ರಿಕ ದೋಷದಿಂದ ಆಗಿದೆಯೋ ಎಂಬ ನಿಖರ ಕಾರಣ ತಿಳಿದಿಲ್ಲ. ಹೊತ್ತಿದ ಬೆಂಕಿ ನೋಡ ನೋಡುತ್ತಲೇ ಇಡೀ ಕಾರನ್ನು ಆವರಿಸಿದೆ. ಇಡೀ ಕಾರು ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಿಲ್ಲ.
ವಿಶಾಲ್ ಮಾರ್ಟ್ ಬಳಿ ಇದ್ದ ಜನರು ನೀರಿಗಾಗಿ ಪರದಾಡಿದರು. ಅಗ್ನಿಶಾಮಕ ದಳ ಸಿಬ್ಬಂದಿ ಬರುವಷ್ಟರಲ್ಲಿ ಕಾರು ಸುಟ್ಟು ಭಸ್ಮವಾಗಿತ್ತು. ಕಾರಿನ ಮಾಲೀಕ ಯಾರು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿಸಿಗಬೇಕಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ದಾವಣಗೆರೆ ವಿಶಾಲ್ ಮಾರ್ಟ್ ಬಳಿ ಧಗಧಗನೆ ಹೊತ್ತಿ ಉರಿದ ಕಾರು pic.twitter.com/bRz115uINQ
— DVG Suddi (@dvg_suddi) March 18, 2024



