ದಾವಣಗೆರೆ: ಜಿಲ್ಲೆಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಎಂ.ಎಸ್. ಮಹೇಶ್ವರಪ್ಪ ಅವರ ಮನೆ, ಕಚೇರಿ, ಸ್ವಗ್ರಾಮ ಸೇರಿ ಮೂರು ಕಡೆ ಬೆಳಗ್ಗೆಯಿಂದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿ, ಅಪಾರ ಪ್ರಮಾಣದ ಸಂಪತ್ತು ಪರಿಶೀಲನೆ ನಡೆಸುತ್ತಿದ್ದಾರೆ.
ವಿದ್ಯಾನಗರದ ಸ್ವಂತ ಮನೆ, ಕಚೇರಿ ಹಾಗೂ ಚನ್ನಗಿರಿ ತಾಲ್ಲೂಕಿನ ಕಂಸಾಗರದ ಸ್ವಗ್ರಾಮದ ಮನೆ ಮೇಲೆ ಏಕ ಕಾಲದಲ್ಲಿ ದಾಳಿ ನಡೆದಿದೆ. ಎಸಿಬಿ ಎಸ್ ಪಿ ಜಯಪ್ರಕಾಶ್ ನೇತೃತ್ವದಲ್ಲಿ ಡಿವೈಎಸ್ಪಿ, ಮಂಜುನಾಥ್ ಇನ್ಸ್‌ಪೆಕ್ಟರ್ ಮಧುಸೂದನ್, ರವೀಂದ್ರ, ಚಿತ್ರದುರ್ಗದ ಸುದೀರ್, ಪ್ರವೀಣ್ ಹಾಗೂ ಸಿಬ್ಬಂದಿಗಳು 20 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲಾ ಪರಿಸರ ಅಧಿಕಾರಿಯಾಗಿರುವ ಮಹೇಶ್ವರಪ್ಪ ಮೂಲ ಚನ್ನಗಿರಿ ತಾಲೂಕಿನ ಕಂಸಾಗರ ಗ್ರಾಮದವರಾಗಿದ್ದಾರೆ. ಮಹೇಶ್ವರಪ್ ದಾವಣಗೆರೆ ಮತ್ತು ಸ್ವಗ್ರಾಮದಲ್ಲಿ ಒಟ್ಟು10 ಮನೆಕ್ಕೂ ಹೆಚ್ಚು ಮನೆಗಳು, 10 ಎಕರೆ ಜಮೀನು, ಕಾರ್, ಒಂದು ಬೈಕ್ ಪತ್ತೆಯಾಗಿದ್ದು, ಅಪಾರ ಪ್ರಮಾಣದ ಬೆಳ್ಳಿ, ಬಂಗಾರ, ನಗದು ಹೊಂದಿದ್ಧಾರೆ. ಈ ಬಗ್ಗೆ ಮಹೇಶ್ವರಪ್ಪ ಅವರ ಆಸ್ತಿಗಳ ದಾಖಲೆಗಳನ್ನು ಅಧಿಕಾರಿಗಳ ತಂಡ ಪರಿಶೀಲಿಸುತ್ತಿದ್ದಾರೆ.