ದಾವಣಗೆರೆ: ಇಂದು ಬೆಳ್ಳಂಬೆಳ್ಳಗೆ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಕಡೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರಿಗೆ ಸೇರಿದ ವಿವಿಧ ಅಕ್ರಮ ಆಸ್ತಿಗಳ ಮೇಲೆ ಏಕಾಕಾಲದಲ್ಲಿ ದಾಳಿ ನಡೆದಿದೆ. ಸ್ವಗ್ರಾಮ ಚನ್ನಗಿರಿಯ ತಣಿಗೆರೆ ಗ್ರಾಮದಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಟಿ.ಎಸ್.ರುದ್ರೇಶಪ್ಪ ಅವರ ಮನೆಯಲ್ಲಿ 3.5 ಕೋಟಿ ಮೌಲ್ಯದ 7ಕೆಜಿ ಚಿನ್ನ 17 ಲಕ್ಷ ನಗದು ಪತ್ತೆಯಾಗಿದೆ. ಹಾಲಿ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ರುದ್ರೇಶಪ್ಪ ಶಿವಮೊಗ್ಗೆ ಚಾಣಕ್ಯ ನಗರದಲ್ಲಿ ವಾಸದ ಮನೆ ಹೊಂದಿದ್ಧಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಸ್ವಗ್ರಾಮ ತಣಿಗೆರೆಯಲ್ಲಿ ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತ್ರತ್ವದಲ್ಲಿ ದಾಳಿ ಮಾಡಲಾಗಿದೆ.