ದಾವಣಗೆರೆ: ಎಸಿಬಿ ಬಲೆಗೆ ಬಿದ್ದ ದಾವಣಗೆರೆ ವಿಭಾಗದ ಫ್ಯಾಕ್ಟರಿ ಮತ್ತು ಬಾಯ್ಲರ್ ಇಲಾಖೆಯ ಉಪ ನಿರ್ದೇಶಕ ಕೆ. ಎಂ ಪ್ರಥಮ್ ಹೆಸರಿನಲ್ಲಿ 2 ಕೋಟಿ 68 ಲಕ್ಷ ಮೌಲ್ಯದ ಚರ ಹಾಗು ಸ್ಥಿರ ಆಸ್ತಿ ಪತ್ತೆಯಾಗಿದೆ.
ದಾವಣಗೆರೆ ಹಾಗು ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ, ಬೆಂಗಳೂರು ನಗರದ ಸಂಜಯ್ ನಗರದ ಮನೆ ನಿವೇಶನ ಭವ್ಯವಾದ ಬಂಗಲೆ, ಪ್ರಥಮ್ ತಾಯಿಗೆ ಸೇರಿದ ಮನೆ ಹಾಗೂ ದಾವಣಗೆರೆ ನಗರದ ಪಿಬಿ ರಸ್ತೆಯ ಹಳೇ ಅಪೂರ್ವ ಹೋಟೆಲ್ ಹಿಂಭಾಗ ಇರುವ ಫ್ಯಾಕ್ಟರಿ ಮತ್ತು ಬೈಲರ್ ಇಲಾಖೆಯ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದರು.
ದಾಳಿ ವೇಳೆ ಬೆಂಗಳೂರಿನ ಸಂಜಯನಗರದಲ್ಲಿ ₹55 ಲಕ್ಷದ ಎರಡು ನಿವೇಶನ. ₹1.30 ಕೋಟಿ ಮೌಲ್ಯದ ಬಂಗಲೆ, ತಾಯಿ ಹೆಸರಲ್ಲಿ ₹20 ಲಕ್ಷದ ಮನೆ, ₹7,75,940 ಮೌಲ್ಯದ 400 ಗ್ರಾಂ ಬಂಗಾರ, 52 ಸಾವಿರ ನಗದು , ಎರಡು ಬೈಕ್ ಎರಡು ಕಾರು ಹಾಗೂ ಗೃಹೋಪಯೋಗಿ ವಸ್ತುಗಳ ಮೊತ್ತವೇ 25 ಲಕ್ಷ ಸೆರಿ ಒಟ್ಟು 63 ಲಕ್ಷದ 96 ಸಾವಿರ ಮೌಲ್ಯದ ಚರ ಸ್ವತ್ತುಗಳು ಪತ್ತೆಯಾಗಿದೆ.
ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿ ಅಧಿಕಾರಿಗಳು ಕಚೇರಿಯಲ್ಲಿ ಕಡತ ಪರಿಶೀಲನೆ ಮಾಡಿದರು.



