ದಾವಣಗೆರೆ: ನೀಟ್, ಜೆಇಇ, ಕೆಸಿಇಟಿ ಪರೀಕ್ಷೆಗಳಿಗೆ ತರಬೇತಿ ನೀಡುವ ಆಕಾಶ್+ಬೈಜೂಸ್ ಕೇಂದ್ರ ನಗರದ ಎ.ವಿ.ಕೆ. ಕಾಲೇಜು ರಸ್ತೆಯಲ್ಲಿ ಆರಂಭಗೊಂಡಿದೆ.
ಉದ್ಘಾಟಿಸಿದ ಬಳಿಕ ಮಾತನಾಡಿದ ಆಕಾಶ್+ಬೈಜೂಸ್‌ನ ದಕ್ಷಿಣ ವಿಭಾಗದ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ವಿದ್ಯಾರ್ಥಿಗಳಿಗೆ ತರಬೇತಿ ನೀಡವ ಆಕಾಶ್+ಬೈಜೂಸ್ ಕ್ಲಾಸ್‌ರೂಂ ಕೇಂದ್ರ ದಾವಣಗೆರೆಯಲ್ಲಿ ಆರಂಭವಾಗಿದೆ. ಆಕಾಶ್+ಬೈಜೂಸ್‌ನ 24 ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ವಾರ್ಷಿಕ 2.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುತ್ತಿದೆ. 8ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗುತ್ತದೆ. ನೀಟ್, ಜೆಇಇ, ಕೆಸಿಇಟಿಗಳಿಗೆ ತರಬೇತಿ ನೀಡಲಾಗುವುದು ಎಂದರು.
ದಾವಣಗೆರೆಯ ಪೋಷಕರ ಬೇಡಿಕೆಯಂತೆ ಆಕಾಶ್ ಬೈಜೂಸ್ ತರಬೇತಿ ಕೇಂದ್ರವನ್ನು ಆರಂಭಿಸಿದ್ದೇವೆ. ಉತ್ತಮ ಗುಣಮಟ್ಟದ ತರಬೇತಿ ನೀಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳೂ ನೀಟ್ ಹಾಗೂ ಜೆಇಇಗಳಲ್ಲಿ ಉತ್ತಮ ತೋರುವಂತೆ ಮಾಡುತ್ತೇವೆ. ಉತ್ತಮ ಬೋಧಕರನ್ನು ಪೂರ್ಣಾವಧಿಗಾಗಿ ನೇಮಕ ಮಾಡಿಕೊಂಡಿದ್ದೇವೆ ಎಂದರು.
ದಾವಣಗೆರೆ ಕೇಂದ್ರದ ಮುಖ್ಯಸ್ಥ ಸುಮಂತ್ ಶೆಟ್ಟಿ ಮಾತನಾಡಿ, ಇಲ್ಲಿನ ವಿದ್ಯಾರ್ಥಿಗಳು ಬೆಂಗಳೂರು, ಮಂಗಳೂರಿಗೆ ತೆರಳಿ ತರಬೇತಿ ಪಡೆಯಬೇಕಿತ್ತು. ಇದೀಗ ದಾವಣಗೆರೆಯಲ್ಲಿಯೇ ಕೇಂದ್ರ ಆರಂಭಿಸಿದ್ದೇವೆ’ಎಂದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಕಿಶೋರ್ ಎಂ, ಪ್ರಾದೇಶಿಕ ಮುಖ್ಯಸ್ಥ ಅರವಿಂದ ಕುಮಾರ್, ಡೆಪ್ಯೂಟಿ ಡೈರೆಕ್ಟರ್ ಸುಧೀರ್ ಕುಮಾರ್ ಎಸ್. ಇದ್ದರು.



