ದಾವಣಗೆರೆ : ಸೂಕ್ತ ದಾಖಲೆ ಇಲ್ಲದ ಕಾರಣ ಕೆ.ಆರ್ ರಸ್ತೆಯ ಶಾದಿ ಮಾಲ್ ಬಳಿ 1.48 ಕೋಟಿ ಹಣ ವಶ ಪಡಿಸಿಕೊಂಡ ಪೊಲೀಸರಿಗೆ ಇದೀಗ ಹಣದ ಮಾಲೀಕ ಯಾರೆಂಬುದು ಪತ್ತೆಯಾಗಿದೆ. 1.48 ಕೋಟಿ ಹಣ ಕಲುಬುರ್ಗಿಯ ಜ್ಯುವೆಲರಿ ಶಾಪ್ ಮಾಲೀಕ ಶ್ರೀಪಾಲ್ ಗೆ ಸೇರಿದ್ದಾಗಿದೆ.
ಹಣದ ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದಾಗ, ಶ್ರೀಪಾಲ್ ಅವರಿಗೆ ದಾವಣಗೆರೆಯಲ್ಲಿ ಸಂಬಂಧಿಕರಿದ್ದು, ಜಮೀನು ಖರೀಸಲು ಹಣ ಕೇಳಿದ್ದರು. ಹೀಗಾಗಿ ಅಂಗಡಿ ಸಿಬ್ಬಂದಿಯೊಂದಿಗೆ 1.48 ಕೊಟಿ ಹಣ ಕಳುಹಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ ಸಂಚಾರಿ ಪೊಲೀಸರು ಕಾರಿನಲ್ಲಿ ಹಣ ಪತ್ತೆಹಚ್ಚಿದ್ದರು. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿತ್ತು. ಇದೀಗ ಪತ್ತೆಯಾದ 1.48 ಹಣವನ್ನು ಹುಬ್ಬಳ್ಳಿ- ಧಾರವಾಡ ಆದಾಯ ತೆರಿಗೆ ಇಲಾಖೆ ಸುಪರ್ದಿಗೆ ನೀಡಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಲಿದ್ದಾರೆ.