ಡಿವಿಜಿ ಸುದ್ದಿ, ದಾವಣಗೆರೆ: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ..? ಈ ಪ್ರಶ್ನೆಗೆ ದಾವಣಗೆರೆ ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಗಳೇ ಉತ್ತರಿಸಬೇಕು. ಅರಣ್ಯ ನಾಶ ಮಾಡಬೇಡಿ, ಹಸಿರೇ ಉಸಿರು ಎಂದು ಪುಂಕಾನು ಪುಂಕವಾಗಿ ಆದೇಶ ಹೊರಡಿಸುವ ಅಧಿಕಾರಿಗಳಿಗಳೇ ಮರಗಳ ಮಾರಣ ಹೋಮಕ್ಕೆ ಕೈ ಹಾಕಿದರೆ ಏನು ಹೇಳಬೇಕು..?
ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಅರಣ್ಯ ಇಲಾಖೆ ಅನುಮತಿ ಪಡೆಯದೇ 10ಕ್ಕೂ ಹೆಚ್ಚು ಮರಗಳ ಮರಣಾ ಹೋಮ ನಡೆದಿದೆ. ಈ ಕುರಿತು ಮರ ಕಡಿಯಲು ಅನುಮತಿ ಕೊಟ್ಟ ಇಂಜಿನಿಯರ್ ಬಿಟ್ಟು ಗುತ್ತಿಗೆದಾರ ಸೇರಿ ಮೂವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಗುತ್ತಿಗೆದಾರ ಸಾಗರ್ ಹಾಗೂ ಕಾರ್ಮಿಕರಾದ ಶ್ರೀನಿವಾಸ್, ಎಲ್.ವಿ. ಮಂಜುನಾಥ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಪಂಚಾಯಿತಿಯ ಶೌಚಾಲಯ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಮರ ಕಡಿಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಸೊಗಸಾಗಿ ಬೆಳೆದಿದ್ದ 10ಕ್ಕೂ ಹೆಚ್ಚು ಮರಗಳನ್ನು ಕಡಿದು ನೆಲಕ್ಕೆ ಉರುಳಿಸಿದ್ದಾರೆ
ಜಿಲ್ಲಾ ಪಂಚಾಯತಿ ಇಂಜಿನಿಯರ್ ಕಾರ್ಯವನ್ನು ಕಟುವಾಗಿ ಖಂಡಿಸಿದ ಪರಿಸರ ಪ್ರೇಮಿ ಕೆ.ಟಿ. ಗೋಪಾಲಗೌಡ, ಮರ ಕಡಿದವರ ಮೇಲೆ ಕೇಸ್ ದಾಖಲಿಸಿಕೊಳ್ಳುವುದಲ್ಲ. ಮೊದಲು ಮರ ಕಡಿಯಲು ಅನುಮತಿ ಕೊಟ್ಟ ಎಂಜಿನಿಯರ್‌ಗೆ ದಂಡ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.