ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ನಿತ್ಯ ಹಾಗೂ ವಾರದ ಸಂತೆಗಳಲ್ಲಿ ಬೀದಿ ಬದಿ ವ್ಯಾಪಾರಸ್ತರಿಂದ ಸುಂಕ ವಸೂಲಾತಿ ಮಾಡಲು ನೀಡಿದ ಕಾರ್ಯದೇಶದ ಅವಧಿ ಮುಕ್ತಾಯವಾಗಿದೆ. ಸುಂಕ ವಸೂಲಾತಿ ಹಕ್ಕಿನ ಬಹಿರಂಗ ಹರಾಜು ಪ್ರಕ್ರಿಯೆ ಕೋವಿಡ್-19 ಮತ್ತು ಇತರೆ ಕಾರಣಗಳಿಂದ ಪ್ರಕ್ರಿಯೆಯಲ್ಲಿರುತ್ತದೆ. ಆದ್ದರಿಂದ ಮಹಾನಗರ ಪಾಲಿಕೆಯ ಗುರುತಿನ ಚೀಟಿ ಇಲ್ಲದೆ ಜಕಾತಿ ವಸೂಲಾತಿ ಮಾಡುವುದು ಕಂಡುಬಂದಲ್ಲಿ ಸುಂಕ ನೀಡಬಾರದು. ಅವರ ವಿವರಗಳನ್ನು ಪಾಲಿಕೆಗೆ ನೀಡಬಹುದೆಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.