ದಾವಣಗೆರೆ: ದಾವಣಗೆರೆ ಜಿಲ್ಲೆಯ ಕುಕ್ಕುವಾಡ ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಾಳೆ ( ನವೆಂಬರ್ 19) ಮಧ್ಯಾಹ್ನ 3 ಘಂಟೆಯಿಂದ ಉಚಿತ ಯೋಗ ಕಾರ್ಯಾಗಾರ ಆಯೋಜಿಸಿದೆ.
ಶಿಕ್ಷಣದಲ್ಲಿ ಯೋಗದ ಮಹತ್ವ ಮತ್ತು ಮಕ್ಕಳ ಮೇಧಾಶಕ್ತಿ ಹೆಚ್ಚಿಸುವ ಕುರಿತು ಉಚಿತ ಯೋಗ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರವನ್ನು ನಡೆಯಲಿದೆ. ಈ ವಿಶೇಷ ಕಾರ್ಯಾಗಾರವನ್ನು ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗ ತಜ್ಞ ಡಾ. ರಾಘವೇಂದ್ರ ಗುರೂಜಿ ನಡೆಸಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಲೋಹಿತಾಶ್ವ ಎಂ.ಆರ್. ವಹಿಸಲಿದ್ದು, ಶಾಲಾ ಮಕ್ಕಳು, ಸಿಬ್ಬಂದಿ ವರ್ಗ ಇನ್ನಿತರ ಆಸಕ್ತರು ಭಾಗವಹಿಸಲಿದ್ದಾರೆ.