ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕಗಳ ಸಹಯೋಗದಿಂದ ರಾಮ್ & ಕೋ ಸರ್ಕಲ್ (ಹರಳೆಣ್ಣೆ ಕೊಟ್ರಬಸಪ್ಪ ಸರ್ಕಲ್ ) ನಲ್ಲಿ ತ್ರಿವಿಧ ದಾಸೋಹಿ ನಡೆದಾಡುವ ದೇವರು ಪದ್ಮಭೂಷಣ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿ ಪ್ರಸಾದವಿನಿಯೋಗ ನೆರವೇರಿಸಲಾಯಿತು.

ಜಿಲ್ಲಾಧ್ಯಕ್ಷ್ಯ ದೇವರಮನಿ ಶಿವಕುಮಾರ್, ಜಿಲ್ಲಾ ಸಂಚಾಲಕ ಟಿಂಕರ್ ಮಂಜಣ್ಣ , ಎಂವಿ ಜಯಪ್ರಕಾಶ್ ಮಾಗಿ , ಟಿ ಎಸ್ ಮಲ್ಲಿಕಾರ್ಜುನ್ ನಾಗರಾಜ್ ಅಂಗಡಿ, ಗುರು, ನಗರ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ವಾಲಿ , ಪ್ರಧಾನ ಕಾರ್ಯದರ್ಶಿ ಮಂಗಳ ಕರಿಬಸವರಾಜ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ದ್ರಾಕ್ಷಾಯಣಮ್ಮ ಶ್ರೀಮತಿ ಶೋಭ ಕೊಟ್ರೇಶ್ ಹಾಗೂ ಮಹಿಳಾ ಪದಾಧಿಕಾರಿಗಳು ಭಾಗವಹಿಸಿದ್ದರು.



