ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ (davangere university) ಮೈಕ್ರೊ ಬಯಾಲಜಿ ವಿಭಾಗದ ಪ್ರೊ.ಗಾಯತ್ರಿ ದೇವರಾಜ ಅವರನ್ನು ಕರ್ತವ್ಯದಿಂದ ಅಮಾನತು (Suspension) ಮಾಡಲಾಗಿದೆ. ಯುಜಿಸಿ (University Grants Commission) ನ್ಯಾಕ್ NAAC (National Assessment and Accreditation Council) ಪರಿಶೀಲನಾ ಸಮಿತಿಯ ಸದಸ್ಯೆಯಾಗಿದ್ದ ಗಾಯತ್ರಿ, ಆಂಧ್ರಪ್ರದೇಶದ ಗುಂಟೂರಿನ ಕೆ ಎಲ್ ಇ ಎಫ್ ವಿವಿಗೆ A++ ನ್ಯಾಕ್ ಮಾನ್ಯತೆ ನೀಡಲು 37 ಲಕ್ಷ ಲಂಚ ಪಡೆಯುವಾಗ ಸಿಬಿಐ (CBI) ಬಲೆಗೆ ಬಿದ್ದಿದ್ದರು.
ದಾವಣಗೆರೆ: ಶಾಲಾ ವಾಹನಗಳಿಗೆ ಜಿಪಿಎಸ್, ಸಿಸಿ ಕ್ಯಾಮೆರಾ ಕಡ್ಡಾಯ; ಜಿಲ್ಲಾಧಿಕಾರಿ ಸೂಚನೆ
ಫೆ.6ರಂದು ನಡೆದ ದಾವಣಗೆರೆ ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಗಾಯತ್ರಿ ಅವರನ್ನು 6 ತಿಂಗಳ ಅವಧಿಗೆ ಅಮಾನತು ಮಾಡಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಈ ಸಂಬಂಧ ಆಂಧ್ರದ ಕೆ ಎಲ್ ಇ ಎಫ್ ವಿವಿಯು ಸಿಬಿಐಗೆ ದೂರು ನೀಡಿತ್ತು. ಇಂದು ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ದಾವಣಗೆರೆ ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಸಿಬಿಐ ಅಧಿಕಾರಿಗಳು ನಿವಾಸಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದರು. ದಾಳಿ ವೇಳೆ ಸಿಬಿಐ 37 ಲಕ್ಷ ನಗದು, 6 ಲ್ಯಾಪ್ ಟಾಪ್, ಐಪೋನ್ ವಶಕ್ಕೆ ಪಡೆದಿತ್ತು.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸಿಬಿಐ ತನಿಖೆ ನಡೆಸುತ್ತಿದೆ.
ದಾವಣಗೆರೆ: ನಿವೇಶನ ಹಕ್ಕುಪತ್ರ ಹಂಚಿಕೆ ವಿಚಾರಕ್ಕೆ ಆಡಳಿತ-ವಿಪಕ್ಷ ನಡುವೆ ಮಾತಿನ ಜಟಾಪಟಿ
ಕೆಸಿಎಸ್‌ಆರ್ ನಿಯಮಗಳ ಪ್ರಕಾರ ಪ್ರೊ. ಗಾಯತ್ರಿ ದೇವರಾಜ ಅವರನ್ನು ಅಮಾನತುಗೊಳಿಸಲಾಗಿದೆ. ಆದೇಶದ ಪ್ರತಿಯನ್ನು ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ತಿಳಿಸಿದ್ದಾರೆ.