ದಾವಣಗೆರೆ: ವಿದ್ಯಾನಗರ ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇಂದು (ಅ.27) ಬೆಳಗ್ಗೆ 10 ರಿಂದ ಸಂಜೆ 5 ರವರಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ.
ಎಫ್-14 ವಿದ್ಯಾನಗರ ಫೀಡರ್‍ನ ತರಳಬಾಳು ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ ಸರ್ಕಾರಿ ಐ.ಟಿ.ಐ. ಕಾಲೇಜು, ಹದಡಿ ರಸ್ತೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಎಫ್-10 ಸರಸ್ವತಿ ಫೀಡರ್‍ನ ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಬಡಾವಣೆ, ಜಗಜೀವನ್ ಭೀಮ ನಗರ, ಸರಸ್ವತಿ ಬಡಾವಣೆ, ಜಯನಗರ ಎ ಮತ್ತು ಬಿ ಬಡಾವಣೆ, ಲಕ್ಷ್ಮಿ ಲೇಔಟ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



