ದಾವಣಗೆರೆ: ಕೇರಳ ಸಮಾಜ ಓಣಂ ಹಬ್ಬದ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ದಾವಣಗೆರೆಯಲ್ಲಿ ಕೇರಳ ಭವನ ನಿರ್ಮಾಣಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ 5 ಲಕ್ಷ ದೇಣಿಗೆ ನೀಡಿದ್ದಾರೆ.
ಅ. 27 ರಂದು ಕೇರಳ ಸಮಾಜ ಹಮ್ಮಿಕೊಂಡಿದ್ದ ಓಣಂ ಹಬ್ಬದಲ್ಲಿ ಕೇರಳ ಭವನ ನಿರ್ಮಾಣಕ್ಕೆ 5 ಲಕ್ಷ ಕೊಡುವ ಆಶ್ವಾಸನೆ ನೀಡಿದ್ದ ಶಾಮನೂರು ಶಿವಶಂಕರಪ್ಪ ಅವರು ಕೇರಳ ಸಮಾಜದ ಮುಖಂಡರನ್ನು ತಮ್ಮ ಶಿವಪಾರ್ವತಿ ನಿವಾಸಕ್ಕೆ ಕರೆಸಿಕೊಂಡು ₹5 ಲಕ್ಷ ದೇಣಿಗೆ ನೀಡಿ, ಭವನ ನಿರ್ಮಿಸಲು ಸೂಚಿಸಿದರು.
- ಕೇರಳ ಸಮಾಜಕ್ಕೆ 5 ಲಕ್ಷ ದೇಣಿಗೆ ಕೊಟ್ಟ ಶಾಮನೂರು ಶಿವಶಂಕರಪ್ಪ
- ಓಣಂ ಹಬ್ಬದಲ್ಲಿ ಭರವಸೆ ನೀಡಿದ್ದ ಶಾಮನೂರು
- ಭರವಸೆ ನೀಡಿ 9 ದಿನದಲ್ಲಿ ಚೆಕ್ ಮೂಲಕ ದೇಣಿಗೆ
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪಿ.ಪವಿತ್ರನ್, ಕಾರ್ಯದರ್ಶಿ ಪಿ.ಜಿ.ಮಣಿಕುಟ್ಟನ್, ಜಂಟಿ ಕಾರ್ಯದರ್ಶಿ ಸೈಂದರಜಿತ್, ಖಜಾಂಚಿ ಅನೀಸ್ ಅಪ್ಪು, ನಿರ್ದೇಶಕರಾದ ಜಯಕುಮಾರ, ಮಣಿ, ಸುರೇಶ ಕುಮಾರ, ಪ್ರಕಾಶ, ಶ್ರೀಜಿತ್, ಮಹಿಳಾ ಘಟಕದ ಅಧ್ಯಕ್ಷೆ ಬಿ.ಪ್ರಸನ್ನ, ಉಪಾಧ್ಯಕ್ಷೆ ಮಂಜುಶಾ ಸೈಮನ್, ಕಾರ್ಯದರ್ಶಿ ಓ.ಜೆ.ಸೀಮಾಪ್ರಿಯಾ, ನಿರ್ದೇಶಕರಾದ ಅಮೃತಾ ರತೀಶ, ರೀಜಾ ಜಯಂತ್, ನಮಿತಾ ಶ್ರೀಜಿತ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.



